ಬಂಟ್ವಾಳ: ನಾವೂರು ಗ್ರಾಮದ ಅಗ್ರಹಾರ ಬೀದಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ದೃಢಕಲಶಾಭಿಷೇಕ ಮತ್ತು ಶ್ರೀಕೃಷ್ಣ ಮಂತ್ರ ಯಾಗವು ದೇವಳದ ಪ್ರಧಾನ ಅರ್ಚಕರಾದ ವೇ.ಮೂ.ಸುದರ್ಶನ್ ಬಲ್ಲಾಳ್ ಅವರ ನೇತೃತ್ವದಲ್ಲಿಬುಧವಾರ ಸಂಪನ್ನಗೊಂಡಿತು.
ಮಂಗಳವಾರ ಸಂಜೆ ಪುಣ್ಯಾಹವಾಚನ ವಾಸ್ತುಬಲಿ, ಹೋಮ, ಸಹಿತ ವಿವಿಧ ವೈಧಿಕ ವಿಧಿವಿಧಾನಗಳು ನಡೆಯಿತು. ಬುಧವಾರ ಬೆಳಿಗ್ಗೆ ಗಣಪತಿ ಹೋಮ, ಪ್ರಧಾನ ಹೋಮ, ಕಲಶಪೂಜೆ ಹಾಗೂ ಕೃಷ್ಣಮಂತ್ರ ಯಾಗದ ಪೂರ್ಣಾಹುತಿ ನೆರವೇರಿತು. ತದನಂತರ ಪ್ರದಾನ ದೇವರಾದ ಶ್ರೀ ಗೋಪಾಲಕೃಷ್ಣ , ಶ್ರೀ ಆಂಜನೇಯ ಮತ್ತು ಶ್ರೀ ಸೋಮನಾಥೇಶ್ವರ ದೇವರಿಗೆ ಕಲಶಾಭಿಷೇಕ ಮಧ್ಯಾಹ್ನ ಮಹಾಪೂಜೆಯ ಪ್ರಸಾದ ವಿತರಣೆ ನಂತರ ಅನ್ನಸಂತರ್ಪಣೆ ನಢಯಿತು. ಬ್ರಹ್ಮಕಲಶ, ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳು,ಸದಸ್ಯರು ಹಾಗೂ ಭಕ್ತರು ಈ ಸಂದರ್ಭ ಉಪಸ್ಥಿತರಿದ್ದರು.