Laboratory for fertilizer analysis at Ullala Near Mangalore. (Imaginary Pic)
ಮಂಗಳೂರು: ಕೃಷಿ ಇಲಾಖೆಯ ರಸಗೊಬ್ಬರ ನಿಯಂತ್ರಣ ಪ್ರಯೋಗಾಲಯವು ವಲಯ ಕೃಷಿ ಹಾಗೂ ತೋಟಗಾರಿಕೆ ಸಂಶೋಧನಾ ಕೇಂದ್ರ, ಉಳ್ಳಾಲ ಇಲ್ಲಿ ನೂತನವಾಗಿ ಕಟ್ಟಡ ನಿರ್ಮಾಣ ಕಾರ್ಯವು ಪ್ರಗತಿಯಲ್ಲಿರುತ್ತದೆ. ಕಟ್ಟಡ ಕಾಮಗಾರಿಗೆ ಕೇಂದ್ರ ಪುರಸ್ಕೃತ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ರೂ.460 ಲಕ್ಷಗಳಿಗೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಪ್ರಾಮ್ಸಿ, ಲೋಕೋಪಯೋಗಿ ಇಲಾಖೆ, ಬೆಂಗಳೂರು ಇವರಿಗೆ ಟೆಂಡರ್ ಅನುಮೋದನೆಯಾಗಿದ್ದು, ಕಟ್ಟಡ ಕಾಮಗಾರಿಯು ಪ್ರಾರಂಭ ಹಂತದಲ್ಲಿದೆ.
ಕೃಷಿ ಇಲಾಖೆಯ ರಸಗೊಬ್ಬರ ಪರಿವೀಕ್ಷಕರು ವಿವಿಧ ರಸಗೊಬ್ಬರ ಮಾರಾಟ ಮಳಿಗೆಗಳಲ್ಲಿ ರಸಗೊಬ್ಬರ ಮಾದರಿಗಳನ್ನು ತೆಗೆದು ಕಳುಹಿಸಬೇಕಾಗಿದ್ದು, ಮಾದರಿಗಳನ್ನು ಈ ಪ್ರಯೋಗಾಲಯದಲ್ಲಿ ವಿಶ್ಲೇಷಣೆ ಕೈಗೊಂಡು, ವಿಶ್ಲೇಷಣಾ ವರದಿಗಳನ್ನು ಸಂಬಂಧಿಸಿದ ಪರಿವೀಕ್ಷಕರಿಗೆ ಕಳುಹಿಸಲಾಗುವುದು ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Laboratory for fertilizer analysis at Ullala Near Mangalore.