ಸಹ್ಯಾದ್ರಿ ಕಾಲೇಜು ಮಂಗಳೂರು ಎಂ.ಬಿ.ಎ.ವಿದ್ಯಾರ್ಥಿಗಳ ಕಾರ್ಪೋರೆಟ್ ಸೋಶಿಯಲ್ ರೆಸ್ಪಾನ್ಸಿಬಿಲಿಟಿಕ್ಲಬ್ ಆಯೋಜಿಸಿದ “ಭೂಮಿಯಲ್ಲಿ ಜೀವನ” ಗದ್ದೆಯಲ್ಲಿ ನೇಜಿ ನೆಡುವ ವಿಶೇಷ ಕಾರ್ಯಕ್ರಮ ಬಂಟ್ವಾಳ ತಾಲೂಕಿನ ನಾವೂರದ ಸಾಮಾಜಿಕ ನೇತಾರ ಸದಾನಂದ ನಾವೂರ ಅವರ ಭತ್ತದ ಗದ್ದೆಯಲ್ಲಿ ನಡೆಯಿತು.
ಉಳುಮೆ ಮಾಡಲಾಗಿದ್ದ ಗದ್ದೆಯಲ್ಲಿ ವಿದ್ಯಾರ್ಥಿಗಳ ತಂಡ ನೇಜಿಯನ್ನು ನೆಡುವ ಮೂಲಕ ಭತ್ತದ ಕೃಷಿಯ ಬಗ್ಗೆ ಮಾಹಿತಿ ಪಡೆದುಕೊಂಡರು.
ಸದಾನಂದ ನಾವೂರ ಅವರು ಭತ್ತದ ಕೃಷಿಯ ಬಗ್ಗೆ ಒಂದಷ್ಟು ಮಾಹಿತಿ ನೀಡಿದರು.
ನೇಜಿ ನೆಟ್ಟ ಬಳಿಕ ಉಳಿದ ಗದ್ದೆಯಲ್ಲಿ ವಿದ್ಯಾರ್ಥಿಗಳು ಕೆಸರಿನಲ್ಲಿ ಆಟ ಆಡಿ ಸಂತೋಷಪಟ್ಟರು.
ಕಾರ್ಯಕ್ರಮದ ಸಂಯೋಜಕ ಅವಿನ್ ಎರಿಕ್ ಕುಟಿನ್ಹಾ ಹಾಜರಿದ್ದರು.