ಗುರುಪೂರ್ಣಿಮೆ ಹಿನ್ನೆಲೆ ಬಿಜೆಪಿ 117ನೇ ಬೂತ್ ನಲ್ಲಿ ನರಿಕೊಂಬು ಏಲಬೆ ಪೂವಪ್ಪ ಪೂಜಾರಿ ಅವರ ಪುತ್ರಿ ಶಿಕ್ಷಕಿ ಅಶ್ವಿನಿ ವಿವೇಕ್ ಅವರನ್ನು ಸನ್ಮಾನಿಸಲಾಯಿತು. ಗ್ರಾಪಂ ಅಧ್ಯಕ್ಷ ಸಂತೋಷ್ ಕುಮಾರ್, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಪುರುಷೋತ್ತಮ ಸಾಲ್ಯಾನ್, ಬೂತ್ ಅಧ್ಯಕ್ಷ ಸುರೇಶ್ ಕುಲಾಲ್ ಶೇಡಿಗುರಿ, ಬೂತ್ ಕಾರ್ಯಧರ್ಶಿ ನಾಗರಾಜ್ ಎಲಬೆ, ನರಿಕೊಂಬು ಸರಕಾರಿ ಶಾಲೆ ಎಸ್.ಡಿ.ಎಂ.ಸಿ. ಸದಸ್ಯ ಕಮಲಾಕ್ಷ ಭೀಮಗದ್ದೆ, ಪಕ್ಷದ ಪ್ರಮುಖರಾದ ಲೋಕೇಶ್ ಕಟ್ಟದಮುದೇಲು, ಆಶಾ ಕಮಲಾಕ್ಷ, ನವೀನ್ ಎಲಬೆ, ದಿರಾಜ, ರೇವತಿ ಪೂವಪ್ಪ ಪೂಜಾರಿ ಇತರರು ಉಪಸ್ಥಿತರಿದ್ದರು.