ಕವರ್ ಸ್ಟೋರಿ

Sajipanadu – Thumbay: ಉಳ್ಳಾಲದ ಸಜೀಪನಡುವಿಗೆ ಹತ್ತಿರವಾಗಲಿದೆ ಬಂಟ್ವಾಳದ ತುಂಬೆ

ಮುಡಿಪುವಿನಿಂದ ತುಂಬೆಗೆ ಹೋಗಬೇಕಾದರೆ ಏನು ಮಾಡಬೇಕು?

ಮೆಲ್ಕಾರಿಗೆ ಬಂದು, ಅಲ್ಲಿಂದ ಬಿ.ಸಿ.ರೋಡಿಗೆ ತೆರಳಿ, ಬಳಿಕ ಹೆದ್ದಾರಿಯಲ್ಲಿ ತುಂಬೆಗೆ ಸಾಗಬೇಕು. ಅದೇ ನೇತ್ರಾವತಿ ನದಿಯನ್ನು ದಾಟಿದರೆ? ಸಮಯದ ಭರಪೂರ ಉಳಿತಾಯ.

ಜಾಹೀರಾತು

NETRAVATHI

ಮುಡಿಪು ಮಾತ್ರವಲ್ಲ, ಸಜಿಪ ಗ್ರಾಮಗಳಿಗೆ ತುಂಬೆ, ಫರಂಗಿಪೇಟೆ ತನ್ಮೂಲಕ ಮಂಗಳೂರು ತಲುಪಲು ಮತ್ತಷ್ಟು ಸುಲಭದ ಮಾರ್ಗವಾಗಿ ಮೂಡಿಬರುವ ಸೇತುವೆಯೊಂದು ನಿರ್ಮಾಣವಾಗಲಿದೆ. ಸುಮಾರು ಏಳು ವರ್ಷಗಳ ಮೊದಲು ಆಗ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಪ್ರಸ್ತಾಪ ಮಂಡಿಸಿದ್ದರು.  ಇದಕ್ಕೀಗ ಗ್ರೀನ್ ಸಿಗ್ನಲ್ ದೊರಕಿದೆ.

ಯಾರಿಗೆ ಏನು ಲಾಭ?

ಎರಡು ಗ್ರಾಮಗಳ ಜನರು ಸಲೀಸಾಗಿ ಸಂಪರ್ಕ ಸಾಸುವ ಅವಕಾಶವನ್ನು ಪಡೆಯಲಿದ್ದಾರೆ. ಸದ್ಯ ಸಜಿಪನಡು ಗ್ರಾಮದ ಜನರು ಮಂಗಳೂರು ಮಹಾನಗರವನ್ನು ತಲುಪಬೇಕಾದರೆ ಸುತ್ತು ಬಳಸಿ ಎರಡು ಮೂರು ಬಸ್ಸುಗಳ ಮೂಲಕ ಸಂಚರಿಸಬೇಕಾದ ಅನಿವಾರ್ಯಯತೆ ಇದೆ. ಸ್ವಂತ ವಾಹನಗಳನ್ನು ಹೊಂದಿರುವ ಮಂದಿ ತಮ್ಮ ವಾಹನಗಳ ಮೂಲಕ ಬೇಕಾದಂತೆ ಸಂಚಾರವನ್ನು ಮಾಡತ್ತಾರೆ. ಆದರೆ ಸಾಮಾನ್ಯ ಬಡ ಜನರು ಸಂಚಾರಕ್ಕಾಗಿ ಸಾರ್ವಜನಿಕ ಸಾರಿಗೆ ಬಸ್ಸುಗಳನ್ನೇ ಆಶ್ರಯಿಸಿಕೊಂಡಿದ್ದು, ಈ ಬಸ್ಸುಗಳ ಮೂಲಕ ಒಂದೋ ತೊಕ್ಕೊಟ್ಟು ಮಾರ್ಗವಾಗಿ ಅಥವಾ ಮೆಲ್ಕಾರ್ ಮಾರ್ಗವಾಗಿ ಸುತ್ತು ಬಳಸಿ ಸಂಚರಿಸಬೇಕಾಗಿದೆ. ಸಜಿಪನಡು ಗ್ರಾಮದ ಜನ ಮಂಗಳೂರು ನಗರಕ್ಕೆ ಕೆಲಸ-ಕಾರ್ಯಗಳ ನಿಮಿತ್ತ ಸಂಚರಿಸಬೇಕಾದರೆ ದಿನವಿಡೀ ವ್ಯಯಿಸುವ ಅಗತ್ಯತೆ ಇದೆ.  ಎರಡು ಗ್ರಾಮಗಳ ನಡುವೆ ಸಂಪರ್ಕ ಸಾಸಲು ಸುತ್ತು ಬಳಸಿ ಸಂಚಾರಕ್ಕೆ ಸುಮಾರು ಅರ್ಧ ತಾಸಿಗೂ ಅಧಿಕ ಸಮಯ ತಗಲುತ್ತಿದ್ದು, ಈ ಸೇತುವೆ ನಿರ್ಮಾಣಗೊಂಡರೆ ಕೇವಲ 10 ನಿಮಿಷಗಳಲ್ಲಿ ತಲುಪಬಹುದು. ಈ ನಿಟ್ಟಿನಲ್ಲಿ ಸಚಿವ ಖಾದರ್ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ತುಂಬೆ-ಸಜಿಪನಡು ಸಂಪರ್ಕ ಸೇತುವೆ ನಿರ್ಮಾಣವಾದರೆ ಈ ಎರಡೂ ಗ್ರಾಮದ ಜನರ ಪಾಲಿಗೆ ಬಹಳಷ್ಟು ಪ್ರಯೋಜನ.

ಹೇಗಿರುತ್ತದೆ ಸೇತುವೆ:

ಸಜೀಪನಡು ಮುಖ್ಯ ಮಾರ್ಗದಿಂದ ಹೊಳೆಬದಿ ಸೇತುವೆಯಾಗುವ ನೇತ್ರಾವತಿ ತಟಕ್ಕೆ ಸುಮಾರು 1.5 ಕಿ.ಮೀ. ದೂರವಿದೆ. ಹಾಗೆಯೇ ಹೊಳೆಯ ಇನ್ನೊಂದು ಬದಿ, ತುಂಬೆ ಫಾದರ್ ಮುಲ್ಲರ್ಸ್ ಆಸ್ಪತ್ರೆಯ ಎದುರುಬದಿ ಇರುವ ರಸ್ತೆಯಲ್ಲಿ ನದಿಗೆ ಸುಮಾರು 1 ಕಿ.ಮೀ.ನಷ್ಟು ದೂರ ಕ್ರಮಿಸಿದರೆ ತಲುಪಬಹುದು. ಈ ಮಾರ್ಗಗಳು ಸೇತುವೆಯ ಸಂಪರ್ಕ ಕೊಂಡಿ. ಮಂಗಳೂರು ವಿಶ್ವವಿದ್ಯಾನಿಲಯ, ದೇರಳಕಟ್ಟೆಯ ವಿವಿಧ ಆಸ್ಪತ್ರೆ, ವೈದ್ಯಕೀಯ ಕಾಲೇಜುಗಳು, ಕೇರಳವನ್ನು ಸಂಪರ್ಕಿಸುವ ದೃಷ್ಟಿಯಿಂದ ಬಹಳ ಅನುಕೂಲವಾಗುವ ಸೇತುವೆ ಎನಿಸಿಕೊಳ್ಳಲಿದೆ.

ಉಳ್ಳಾಲಕ್ಕೆ ಸೇರಿದೆ ಸಜೀಪನಡು

ಹಿಂದೆ  ಬಂಟ್ವಾಳ ತಾಲೂಕಿನಲ್ಲೇ ಇದ್ದ ಪ್ರಸ್ತುತ ಉಳ್ಳಾಲ ತಾಲೂಕಿಗೆ ಸೇರಿದ ಸಜೀಪನಡು ಹಾಗೂ ಬಂಟ್ವಾಳ ತಾಲೂಕಿನ ತುಂಬೆಯನ್ನು ಬೇರ್ಪಡಿಸಿರುವುದು ನೇತ್ರಾವತಿ ನದಿ. ಇದೀಗ ಇವೆರಡೂ ಊರುಗಳನ್ನು ಬೆಸೆಯುವ ಕೆಲಸವನ್ನು ಸೇತುವೆ ಮಾಡಲಿದೆ.

ನೇತ್ರಾವತಿ ನದಿಗೆ ಅಡ್ಡಲಾಗಿ ಸುಮಾರು 60 ಕೋಟಿ ರೂಪಾಯಿ ವೆಚ್ಚದಲ್ಲಿ 340 ಮೀಟರ್ ಉದ್ದದ ಸೇತುವೆ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆ ಯಿಂದ ಹಸಿರು ನಿಶಾನೆ ದೊರಕಿದ್ದು, ಗುರುವಾರ ಈ ಕುರಿತು ರಾಜ್ಯಮಟ್ಟದ ತಾಂತ್ರಿಕ ಸಲಹಾ ಮತ್ತು ಅಂದಾಜುಪಟ್ಟಿ ಸಮಿತಿಯ ಸಭೆಯಲ್ಲೂ ಇದರ ಪರಿಶೀಲನೆ ನಡೆದಿದೆ. ಇದು ಸಂಪೂರ್ಣವಾದ ಬಳಿಕ ವಿಸ್ತ್ಋತ ಯೋಜನಾ ವರದಿಯ ತಾಂತ್ರಿಕ ಅನುಮೋದನೆ ಪಡೆದು ಟೆಂಡರ್ ಪ್ರಕ್ರಿಯೆ ನಡೆಯಲಿದೆ.

ಸೇತುವೆ ನಿರ್ಮಾಣಕ್ಕೆ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ(ಕೆಆರ್‌ಡಿಸಿಎಲ್)ದ ಮೂಲಕ ಕ್ರೀಯಾಯೋಜನೆ ಸಿದ್ಧಪಡಿಸಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಹಲವು ಕಾರಣಕ್ಕೆ ಅದು ವಿಳಂಬವಾಗಿದ್ದು, ಕಳೆದ ಡಿಸೆಂಬರ್‌ನಲ್ಲಿ ಸೇತುವೆಗೆ ನಿರ್ಮಾಣಕ್ಕೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ಸೂಚಿಸಿತ್ತು. ಇದೀಗ ಲೋಕೋಪಯೋಗಿ ಇಲಾಖೆಯ ಮೂಲಕ 60 ಕೋ.ರೂ. ಅನುದಾನ ಮಂಜೂರಾಗಿ ನಬಾರ್ಡ್ ಆರ್‌ಐಡಿಎಫ್ ೩೧ನಡಿ ಸೇತುವೆ ನಿರ್ಮಾಣವಾಗಲಿದೆ. ಸೇತುವೆ ನಿರ್ಮಾಣದ ಟೆಂಡರ್ ಪ್ರಕ್ರಿಯೆಗೆ ಅಂತಿಮ ಹಂತದ ಕೆಲಸಗಳು ನಡೆಯುತ್ತಿದ್ದು, ಸಿಆರ್‌ಝಢ್ ಅನುಮತಿಗಾಗಿ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಇಲಾಖೆಯು ಈಗಾಗಲೇ ಸ್ಥಳೀಯ ಮಣ್ಣು ಪರೀಕ್ಷೆಯನ್ನೂ ಪೂರ್ಣಗೊಳಿಸಿದೆ. ಜು. ೩ರಂದು ಮಂಗಳೂರಿನಲ್ಲಿ ನಡೆದ ಸಮಿತಿ ಸಭೆಯಲ್ಲಿ ಪರಿಶೀಲನೆಯನ್ನೂ ನಡೆಸಲಾಗಿದೆ.

340 ಮೀಟರ್ ಉದ್ದ, 12 ಮೀಟರ್ ಅಗಲ:

ಒಟ್ಟು ೩೪೦ ಮೀ. ಉದ್ದಕ್ಕೆ ಸೇತುವೆ ನಿರ್ಮಾಣವಾಗಲಿದ್ದು, ೧೨ ಮೀ. ಅಗಲವನ್ನು ಹೊಂದಿರುತ್ತದೆ. ಮಧ್ಯೆ ೮ ಮೀ. ಅಗಲದ ರಸ್ತೆ ನಿರ್ಮಾಣವಾಗಲಿದೆ. ಸೇತುವೆಯಲ್ಲಿ ಒಟ್ಟು ೯ ಅಂಕಣಗಳಿದ್ದು, ೮ ಅಂಕಣಗಳು ೩೦ ಮೀ. ಅಂತರದಲ್ಲಿದ್ದು, ೧ ಅಂಕಣ ೭೦ ಮೀ. ಅಂತರಕ್ಕೆ ಬೌಸ್ಟಿçಂಗ್ ಮಾದರಿಯಲ್ಲಿ ನಿರ್ಮಾಣಗೊಳ್ಳಲಿದೆ. ೬ ಮೀ. ಎತ್ತರಕ್ಕೆ ಸ್ಲಾಬ್ ನಿರ್ಮಾಣವಾಗಲಿದೆ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ ಸೇತುವೆಯ ಎರಡೂ ಬದಿ ಸಂಪರ್ಕ ರಸ್ತೆಗಳು, ಒಂದಷ್ಟು ಉದ್ದಕ್ಕೆ ತಡೆಗೋಡೆ ನಿರ್ಮಾಣವಾಗಲಿದೆ. ಈ ಸೇತುವೆಯು ತುಂಬೆ ಜಂಕ್ಷನ್ ಹಾಗೂ ಸಜೀಪ ಜಂಕ್ಷನ್ ಮೂಲಕ ಮಂಗಳೂರು-ಬೆಂಗಳೂರು ರಾಷ್ಟಿçಯ ಹೆದ್ದಾರಿ ಹಾಗೂ ಮುಡಿಪು-ಮೆಲ್ಕಾರ್ ರಾಜ್ಯ ಹೆದ್ದಾರಿಯನ್ನು ಸಂಪರ್ಕಿಸಲಿದೆ.

A proposal was submitted to the government to prepare an action plan for the construction of the bridge through the Karnataka Road Development Corporation Limited (KRIDL). However, due to various reasons, it was delayed, and last December, the state cabinet approved the construction of the bridge. Now, a grant of 60 crore rupees has been sanctioned through the Public Works Department, and the bridge will be constructed under NABARD RIDF scheme 31. The tender process for the construction of the bridge is in its final stages, and a proposal has been submitted for approval. The department has already completed the local soil testing. A review was also conducted in a committee meeting held in Mangalore on July 3.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.