PANEMANGALORE BRIDGE ಪಾಣೆಮಂಗಳೂರು ಸೇತುವೆಯ ಸಾಮರ್ಥ್ಯ ಪರಿಶೀಲನೆಗೆ ಸಂಬಂಧಿಸಿ ಮತ್ತಷ್ಟು ಅಧ್ಯಯನ ನಡೆಯಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ DINESH GUNDURAO ದಿನೇಶ್ ಗುಂಡೂರಾವ್ ನಿರ್ದೇಶನದಂತೆ BANTWAL MUNCIPALITY ಪುರಸಭೆ ಮುಖ್ಯಾಧಿಕಾರಿ ಮನವಿ ಮಾಡಿದ ಮೇರೆಗೆ ಆಗಮಿಸಿ ಪ್ರಾಥಮಿಕ ಸಮೀಕ್ಷೆ ನಡೆಸಿದ ಎನ್.ಐ.ಟಿ.ಕೆ. NITK ತಂಡ ಸೂಚಿಸಿದ್ದು, ಲಘು ವಾಹನಗಳನ್ನಷ್ಟೇ ತಾತ್ಕಾಲಿಕವಾಗಿ ಸಂಚರಿಸಲು ಅವಕಾಶ ನೀಡಬಹುದು ಎಂದು ತಿಳಿಸಿದೆ.
ಸೇತುವೆಯನ್ನು ಬಲಪಡಿಸಲು ಹಾಗೂ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ತಾಂತ್ರಿಕ ಅಧ್ಯಯನವನ್ನು ವಿವರವಾಗಿ ನಡೆಸಬೇಕು ಎಂದು ಪ್ರೊ.ಬಿ.ಮನು ಮಾರ್ಗದರ್ಶನದಲ್ಲಿ ಸಹಾಯಕ ಪ್ರೊಫೆಸರ್ ಗಳಾದ ಡಾ. ಜೆ.ವಿಜಯ ವೆಂಗಡೇಶ್ ಕುಮಾರ್, ಡಾ. ಟಿ.ಪಳನಿಸ್ವಾಮಿ ಅವರನ್ನು ಒಳಗೊಂಡ ತಂಡ ಬಂಟ್ವಾಳ ಮುಖ್ಯಾಧಿಕಾರಿಗಳಿಗೆ ವರದಿ ನೀಡಿದೆ. ಸಾರ್ವಜನಿಕ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಅಗತ್ಯ ದುರಸ್ತಿ ಕಾರ್ಯ, ಸೇತುವೆಯನ್ನು ಗಟ್ಟಿಗೊಳಿಸುವ ಹಂತದ ಕ್ರಮಗಳನ್ನು ಮಾಡಬೇಕು. ಸಮಗ್ರ ತಾಂತ್ರಿಕ ಅಧ್ಯಯನವನ್ನು ಆದಷ್ಟು ಬೇಗ ಕೈಗೊಳ್ಳಬೇಕು ಎಂದು ತಿಳಿಸಿದೆ. ಸೇತುವೆ ಪ್ರವೇಶದ ಆರಂಭಿಕ ಜಾಗದಲ್ಲಿ ವತಿಯಿಂದ ತುರ್ತು ಕಾಮಗಾರಿಗಳನ್ನು ನಡೆಸುವ ಬಗ್ಗೆ ವರದಿಯಲ್ಲಿ ಉಲ್ಲೇಖಿಸಲಾಗಿದೆ.