ಬಂಟ್ವಾಳದಿಂದ ಪುಂಜಾಲಕಟ್ಟೆ ಕಡೆಗೆ ತೆರಳುವ ಹೆದ್ದಾರಿಯ ಬಿ.ಸಿ.ರೋಡ್ ನ ಭಂಡಾರಿಬೆಟ್ಟು BHANDARIBETTU ಸಮೀಪ ಮಳೆಗೆ ಮಣ್ಣು ಸಹಿತ ಬಂಡೆಕಲ್ಲೊಂದು ಜರಿದು ರಸ್ತೆಗೆ ಬಿದ್ದ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ. ಮಧ್ಯಾಹ್ನ ಭಾರಿ ಗಾಳಿ ಮಳೆಗೆ ಮಣ್ಣು ಕುಸಿದ ವೇಳೆ ಬಂಡೆಕಲ್ಲು ರಸ್ತೆಗೆ ಉರುಳಿದೆ ಎನ್ನಲಾಗಿದೆ. ಬಳಿಕ ಪುರಸಭೆಯ ಜೆಸಿಬಿಯಿಂದ ತೆರವು ಕಾರ್ಯ ನಡೆಯಿತು. ಪುರಸಭಾ ಸದಸ್ಯ ಹರಿಪ್ರಸಾದ್ , ಕಂದಾಯ ಇಲಾಖಾಧಿಕಾರಿಗಳು ಸ್ಥಳದಲ್ಲಿ ಹಾಜರಿದ್ದರು