ಬಂಟ್ವಾಳ ತಾಲೂಕಿನ ಹಲವೆಡೆ ಮಳೆ ಮುಂದುವರಿದಿದ್ದು, ಗಾಳಿ ಮಳೆಯಿಂದಾಗಿ ಹಲವೆಡೆ ಅನಾಹುತಗಳು ಸಂಭವಿಸಿದೆ.
ಕಡೇಶ್ವಾಲ್ಯ ಗ್ರಾಮದ ನಡ್ಯೇಲು ಎಂಬಲ್ಲಿ ಕಾಲುಸಂಕ ಮುರಿದು ಬಿದ್ದ ಘಟನೆ ನಡೆದಿದೆ. ಈಗಾಗಲೇ ಅಲ್ಲಿ ಎಚ್ಚರಿಕೆ ಫಲಕ ಅಳವಡಿಸಿದ್ದರಿಂದ ಯಾವುದೇ ಅನಾಹುತ ಸಂಭವಿಸಿರುವುದಿಲ್ಲ ಎಂದು ಕಂದಾಯ ಇಲಾಖಾಧಿಕಾರಿಗಳು ತಿಳಿಸಿದ್ದಾರೆ.
ಬಂಟ್ವಾಳದಿಂದ ಪುಂಜಾಲಕಟ್ಟೆ ಕಡೆಗೆ ತೆರಳುವ ಹೆದ್ದಾರಿಯ ಬಿ.ಸಿ.ರೋಡ್ ನ ಭಂಡಾರಿಬೆಟ್ಟು ಸಮೀಪ ಮಳೆಗೆ ಮಣ್ಣುಸಹಿತ ಬಂಡೆಕಲ್ಲೊಂದು ಜರಿದು ರಸ್ತೆಗೆ ಬಿದ್ದ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ. ಬಳಿಕ ಪುರಸಭೆ ವತಿಯಿಂದ ತೆರವು ಕಾರ್ಯ ನಡೆಯಿತು. ಸದಸ್ಯ ಹರಿಪ್ರಸಾದ್, ಕಂದಾಯ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.
ಕಡೇಶ್ವಾಲ್ಯ ಗ್ರಾಮದ ನಡ್ಯೇಲು ಎಂಬಲ್ಲಿ ಕಾಲುಸಂಕ ಮುರಿದು ಬಿದ್ದ ಘಟನೆ ನಡೆದಿದೆ. ಈಗಾಗಲೇ ಅಲ್ಲಿ ಎಚ್ಚರಿಕೆ ಫಲಕ ಅಳವಡಿಸಿದ್ದರಿಂದ ಯಾವುದೇ ಅನಾಹುತ ಸಂಭವಿಸಿರುವುದಿಲ್ಲ ಎಂದು ಕಂದಾಯ ಇಲಾಖಾಧಿಕಾರಿಗಳು ತಿಳಿಸಿದ್ದಾರೆ.
ಬಾಳ್ತಿಲ ಗ್ರಾಮದ ಚಿಲಿಂಬಿ ಎಂಬಲ್ಲಿ ಸಂಕಪ್ಪ ಎಂಬವರ ವಾಸ್ತವ್ಯದ ಮನೆಗೆ ತೀವ್ರ ಹಾನಿಯಾಗಿರುತ್ತದೆ.
ಕಡೇಶ್ವಾಲ್ಯ ಗ್ರಾಮದ ನಡ್ಯೇಲು ಎಂಬಲ್ಲಿ ಕಾಲುಸಂಕ ಮುರಿದು ಬಿದ್ದ ಘಟನೆ ನಡೆದಿದೆ. ಈಗಾಗಲೇ ಅಲ್ಲಿ ಎಚ್ಚರಿಕೆ ಫಲಕ ಅಳವಡಿಸಿದ್ದರಿಂದ ಯಾವುದೇ ಅನಾಹುತ ಸಂಭವಿಸಿರುವುದಿಲ್ಲ ಎಂದು ಕಂದಾಯ ಇಲಾಖಾಧಿಕಾರಿಗಳು ತಿಳಿಸಿದ್ದಾರೆ. ಬಾಳ್ತಿಲ ಗ್ರಾಮದ ಚಿಲಿಂಬಿ ಎಂಬಲ್ಲಿ ಸಂಕಪ್ಪ ಎಂಬವರ ವಾಸ್ತವ್ಯದ ಮನೆಗೆ ತೀವ್ರ ಹಾನಿಯಾಗಿರುತ್ತದೆ. ಕೆದಿಲ ಗ್ರಾಮದಲ್ಲಿ ಮಾರಪ್ಪ ಸುವರ್ಣ ಎಂಬುವವರ ಜಮೀನಿನಲ್ಲಿರುವ ನಿರ್ಮಾಣ ಹಂತದ ಸಭಾಭವನದ ಕಟ್ಟಡದ ಮೇಲೆ ಅಕೇಶಿಯಾ ಮರ ಬಿದ್ದು ಭಾಗಶಃ ಹಾನಿಯಾಗಿದೆ ಎಂದು ಕಂದಾಯ ಇಲಾಖಾ ಕಚೇರಿ ಮಾಹಿತಿ ತಿಳಿಸಿದೆ.