ಕಳೆದ 8 ವರ್ಷಗಳ ಹಿಂದೆ ಅವಿಲ್ ಮಿನೇಜಸ್ ಸ್ಥಾಪಕಾಧ್ಯಕ್ಷತೆಯಲ್ಲಿ ಆರಂಭ ಗೊಂಡ ಬಂಟ್ವಾಳ ತಾಲೂಕಿನ ಲೋರೆಟ್ಟೋ ಹಿಲ್ಸ್ ರೋಟರಿ ಕ್ಲಬ್ ಕಳೆದ ಸಾಲಿನಲ್ಲಿ ಜಿಲ್ಲೆಯ ಅತ್ಯುನ್ನತ ಡೈಮಂಡ್ ಪ್ಲಸ್ ಸಹಿತ ಜಿಲ್ಲಾ ಮಟ್ಟದ 3 ಪ್ರಶಸ್ತಿ ಗಳಿಸಿಕೊಂಡಿದ್ದು, ಪ್ರಸಕ್ತ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಜುಲೈ 6 ರಂದು ಸಂಜೆ ಗಂಟೆ 6.30ಕ್ಕೆ ಲೋರೆಟ್ಟೋ ಹಿಲ್ಸ್ ಸಭಾಂಗಣ ದಲ್ಲಿ ನೆರವೇರಲಿದೆ.
ಈ ವಿಷಯವನ್ನು ನಿಯೋಜಿತ ಅಧ್ಯಕ್ಷ ವಿಜಯ್ ಫೆರ್ನಾಂಡೀಸ್ ಅವರು ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಪದಗ್ರಹಣ ಕಾರ್ಯಕ್ರಮದಲ್ಲಿ ರೋಟರಿ ಮಾಜಿ ಜಿಲ್ಲಾ ಗವರ್ನರ್ ಕೇಶವ ಎಚ್. ಆರ್., ಕ್ಲಬ್ಬಿನ ಸಲಹೆಗಾರ ಮಾಜಿ ಜಿಲ್ಲಾ ಗವರ್ನರ್ ಎನ್. ಪ್ರಕಾಶ್ ಕಾರಂತ್, ಸಹಾಯಕ ಗವರ್ನರ್ ಸಿಎ ಉಮೇಶ್ ರಾವ್ ಮಿಜಾರ್ ಮತ್ತಿತರ ಗಣ್ಯರು ಭಾಗವಹಿಸಲಿದ್ದು, ಪ್ರತಿಭಾನ್ವಿತ ವಿದ್ಯಾರ್ಥಿಗಳು ಮತ್ತು ವಿವಿಧ ಕ್ಷೇತ್ರ ಗಳ ಸಾಧಕರಿಗೆ ಸನ್ಮಾನ ನಡೆಯಲಿದೆ ಎಂದರು.
ಕಳೆದ ಸಾಲಿನಲ್ಲಿ ಕ್ಲಬ್ಬಿನ ಅಧ್ಯಕ್ಷ ಸುರೇಶ ಶೆಟ್ಟಿ ಸಿದ್ದಕಟ್ಟೆ ಮತ್ತು ಕಾರ್ಯದರ್ಶಿ ರಾಜೇಶ್ ಶೆಟ್ಟಿ ಸೀತಾಳ ನೇತೃತ್ವದಲ್ಲಿ ನಡೆಸಿದ್ದ ವಿವಿಧ ಸೇವಾ ಚಟುವಟಿಕೆ ಸೇರಿದಂತೆ ರೋಟರಿ ಸಂಸ್ಥೆಗೆ ಸದಸ್ಯರು ನೀಡಿದ ದೇಣಿಗೆ ಮತ್ತು ಇಮೇಜ್ ವೃದ್ಧಿ ಗೊಳಿಸಿದ ಪರಿಣಾಮ ಜಿಲ್ಲಾ ಮಟ್ಟದ 3 ಪ್ರಶಸ್ತಿಗಳು ಒಲಿದು ಬಂದಿದೆ. ಕ್ಲಬ್ಬಿನ ಮಾಜಿ ಅಧ್ಯಕ್ಷೆ ಶ್ರುತಿ ಮಾಡ್ತಾ ನೇತೃತ್ವದಲ್ಲಿ ಮಂಗಳೂರಿನಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಮಹಿಳಾ ಸಮ್ಮೇಳನಕ್ಕೂ ಪ್ರಶಸ್ತಿ ದೊರೆತಿದೆ. ರೋಟರಿ ಇತಿಹಾಸದಲ್ಲೇ ಪ್ರಥಮ ಬಾರಿಗೆ ಕಂಬಳ ಕೂಟ ಆಯೋಜಿಸಿದೆ ಎಂದರು.
ಸುದ್ದಿಗೋಷ್ಠಿ ಯಲ್ಲಿ ಉಪಸ್ಥಿತರಿದ್ದ ಮಾಜಿ ಜಿಲ್ಲಾ ಸಹಾಯಕ ಗವರ್ನರ್ ರಾಘವೇಂದ್ರ ಭಟ್ ಹೊಕ್ಕಾಡಿಗೋಳಿ, ನಿಯೋಜಿತ ವಲಯ ಸೇನಾನಿ ರಾಮಚಂದ್ರ ಶೆಟ್ಟಿಗಾರ್ ಅಣ್ಣಳಿಕೆ, ನಿಕಟಪೂರ್ವ ಅಧ್ಯಕ್ಷ ಸುರೇಶ್ ಶೆಟ್ಟಿ ಸಿದ್ದಕಟ್ಟೆ, ನಿಯೋಜಿತ ಕಾರ್ಯದರ್ಶಿ ಮೋಹನ್ ಕೆ. ಶ್ರೀಯಾನ್ ರಾಯಿ ಪೂರಕ ಮಾಹಿತಿ ನೀಡಿದರು.