ಮಾರ್ನಬೈಲು ಅಯ್ಯಪ್ಪ ಸ್ವಾಮಿ ಮಂದಿರದ ಅಭಿವೃದ್ಧಿ ಮತ್ತು ಭೂಮಿ ಖರೀದಿ ಅಂಗವಾಗಿ ಸ್ವಾಮಿಗಾಗಿ ಭೂಮಿ ಸೇವೆ ಎಂಬ ವಿಶೇಷ ಅಭಿಯಾನದ ಪ್ರಾರಂಭೋತ್ಸವ ಮಾರ್ನಬೈಲು ಶ್ರೀ ಅಯ್ಯಪ್ಪ ಸ್ವಾಮಿ ಮಂದಿರದಲ್ಲಿ ನಡೆಯಿತು.
ದೀಪ ಬೆಳಗಿಸಿ ಅಭಿಯಾನ ಉದ್ಘಾಟಿಸಿದ ಮಾಜಿ ಸಚಿವ ಬಿ. ರಮಾನಾಥ ರೈ ಮಾತನಾಡಿ ಅಯ್ಯಪ್ಪ ದೇವರನ್ನು ಪರಿಶುದ್ಧವಾದ ಭಕ್ತಿಯಿಂದ ಪ್ರಾರ್ಥಿಸಿದರೆ ನಿಜವಾಗಿಯೂ ನಾವು ಬೆಳೆಯುವ ಜೊತೆಗೆ ಒಳ್ಳೆಯ ಸಮಾಜ ನಿರ್ಮಾಣವಾಗುತ್ತದೆ. ಸ್ವಾಮಿಗಾಗಿ ಭೂಮಿ ಸೇವೆ ಈ ಅಭಿಯಾನದಲ್ಲಿ ಎಲ್ಲರೂ ತೊಡಗಿಸುವ ಮೂಲಕ ಭೂಮಿ ಖರೀದಿಸುವ ಸಂಕಲ್ಪ ಅತೀ ಶೀಘ್ರವಾಗಿ ಈಡೇರಲಿ ಎಂದರು.
ಮಂದಿರದ ಅಭಿವೃದ್ಧಿ ಸಮಿತಿ ಸಹಗೌರವಾಧ್ಯಕ್ಷ, ಉದ್ಯಮಿ ಸುಧಾಕರ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿ. ಮಾಜಿ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರು, ತುಂಬೆ ಶ್ರೀ ಮಹಾಲಿಂಗೇಶ್ವರ ಕ್ಷೇತ್ರದ ಅಧ್ಯಕ್ಷ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಶ್ರೀ ಕ್ಷೇತ್ರ ಗೆಜ್ಜೆಗಿರಿ ದೇಯಿ ಬೈದೈತಿ ಕೋಟಿ-ಚೆನ್ನಯ ಮೂಲಸ್ಥಾನ ಅಭಿವೃದ್ಧಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಕೆ. ಸಂಜೀವ ಪೂಜಾರಿ, ಕೂಟತ್ತಜೆ ಶ್ರೀ ಉಳ್ಳಾಲ್ತಿ ಅಮ್ಮನವರ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ, ಹರಿಕಿರಣ್ ಗಟ್ಟಿ ಕೂಟತ್ತಜೆ, ಲಯನ್ಸ್ ಕ್ಲಬ್ ಮಂಗಳೂರು ಅಧ್ಯಕ್ಷ ಜಯರಾಜ್ ಪ್ರಕಾಶ್, ಸುಮ ಶ್ರೀಧರ್ ಅಮ್ಟೂರು ಭಾಗವಹಿಸಿ, ಶುಭ ಹಾರೈಸಿದರು. ಶ್ರೀ ಅಯ್ಯಪ್ಪ ಸ್ವಾಮಿ ಮಂದಿರ ಆಡಳಿತ ಟ್ರಸ್ಟ್ ಗೌರವ ಅಧ್ಯಕ್ಷ ಕೃಷ್ಣ ಗುರುಸ್ವಾಮಿ ಮಾರ್ನಬೈಲು, ಟ್ರಸ್ಟ್ ಅಧ್ಯಕ್ಷ ಎನ್. ಪುರುಷೋತ್ತಮ ಪೂಜಾರಿ ನಾಗನವಳಚ್ಚಿಲು, ಭಜನಾ ಮಂಡಳಿ ಅಧ್ಯಕ್ಷ ಸುರೇಶ್ ಕುಲಾಲ್ ಕಲ್ಲಾಡಿಗೋಳಿ, ಮಂದಿರ ಅಭಿವೃದ್ಧಿ ಸಮಿತಿ ಕಾರ್ಯದರ್ಶಿ ಅಶೋಕ್ ಗಟ್ಟಿ ನಂದಾವರ, ಖಜಾಂಚಿ ರಂಜಿತ್ ರಾವ್ ಬಟ್ಟಡ್ಕ, ಟ್ರಸ್ಟ್ ಕಾರ್ಯದರ್ಶಿ ಯಶವಂತ ಕೆ. ಪುತ್ತೂರು, ಖಜಾಂಚಿ ಗಣೇಶ್ ಗುಡ್ಡೆಯಂಗಡಿ, ಶಬರಿ ಮಾತೃ ಮಂಡಳಿ ಕಾರ್ಯದರ್ಶಿ ತಾರಾ ಭಾಸ್ಕರ್ ಕೊಲ್ಲುಕೋಡಿ, ಭಜನಾ ಮಂಡಳಿ ಕಾರ್ಯದರ್ಶಿ ನಿತಿನ್ ಕುಮಾರ್ ಮಾರ್ನಬೈಲು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ದಾನಿಗಳು ಭೂದಾನ ಮಾಡುವ ಮೂಲಕ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿಸಿದರು.
ಅಯ್ಯಪ್ಪ ಸ್ವಾಮಿ ಮಂದಿರದ ಅಭಿವೃದ್ಧಿ ಸಮಿತಿ ಅಧ್ಯಕ್ಷ ದಾಮೋದರ ಬಿ. ಎಂ. ಮಾರ್ನಬೈಲು ಸ್ವಾಗತಿಸಿದರು. ಟ್ರಸ್ಟಿ ಕೃಷ್ಣಪ್ಪ ಬಂಗೇರ ಕಂಚಿಲ ಪ್ರಸ್ತಾವನೆ ನೀಡಿದರು. ಶಬರಿ ಮಾತೃ ಮಂಡಳಿ ಅಧ್ಯಕ್ಷೆ ಗಾಯತ್ರಿ ಆರ್. ಕಂಬಳಿ ಧನ್ಯವಾದ ಸಮರ್ಪಿಸಿದರು. ಉಪಾಧ್ಯಕ್ಷ ಕೇಶವ ಮಾಸ್ತರ್ ಮಾರ್ನಬೈಲು ನಿರೂಪಿಸಿದರು.