ಘಟ್ಟ ಪ್ರದೇಶದಲ್ಲಿ ವ್ಯಾಪಕ ಮಳೆಯಾಗಿರುವ ಹಿನ್ನೆಲೆಯಲ್ಲಿ ನೇತ್ರಾವತಿ ನದಿಯಲ್ಲಿ ಹರಿವು ಜಾಸ್ತಿಯಾಗಿರುವ ಕಾರಣ ಅಣೆಕಟ್ಟಿನಿಂದ ನೀರು ಹೊರಬಿಡುವ ಪ್ರಕ್ರಿಯೆಗಳು ನಡೆಯುತ್ತಿರುವ ಹಿನ್ನೆಲೆ ಬಂಟ್ವಾಳ ದಲ್ಲಿ ನೇತ್ರಾವತಿ ನದಿ ಗುರುವಾರ ಬೆಳಗ್ಗೆ 7.2 ಮೀಟರ್ ಎತ್ತರದಲ್ಲಿ ಹರಿಯುತ್ತಿತ್ತು. ಬಂಟ್ವಾಳ ಪ್ರದೇಶದಲ್ಲಿ ಇಂದು ಮಳೆಯ ವಾತಾವರಣ ಕಂಡುಬಂದಿದ್ದರೂ ಯಾವುದೇ ಅನಾಹುತಗಳು ಕಂಡುಬಂದಿಲ್ಲ. ಆದಾಗ್ಯೂ ತೀರಪ್ರದೇಶದ ನಿವಾಸಿಗಳು ಎಚ್ಚರದಲ್ಲಿರುವಂತೆ ಸೂಚಿಸಲಾಗಿದೆ.