ಅಗೇಲು ಹಾಗೂ ಕೋಲ ಸೇವೆಗೆ ಪ್ರಸಿದ್ಧಿ ಪಡೆದಿರುವ ಕಾರಣೀಕ ಕ್ಷೇತ್ರ ಪಣೋಲಿಬೈಲ್ ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ಭಾನುವಾರ ಭಕ್ತರಿಂದ 3871 ಅಗೇಲು ಸೇವೆಗಳು ಸಂದಾಯವಾಗಿದ್ದು, ಇದು ಈ ವಷದಲ್ಲಿ ಸಂದಾಯವಾದ ಗರಿಷ್ಠ ಸಂಖ್ಯೆಯ ಅಗೇಲು ಸೇವೆಯಾಗಿದೆ. ವಿಶೇಷವಾಗಿ ಮಕ್ಕಳ ಶೈಕ್ಷಣಿಕ ವಿಚಾರವಾಗಿ ಈ ಸಮಯದಲ್ಲಿ ಅಗೇಲು ಸೇವೆ ಸಂದಾಯವಾಗುವುದರಿಂದ ಸೇವೆಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಪರೀಕ್ಷಾ ಫಲಿತಾಂಶಗಳು ಬಂದು ಮಕ್ಕಳ ಶಾಲಾ ದಾಖಲಾತಿಗಳು ಪೂರ್ಣಗೊಂಡ ಬಳಿಕ ಕ್ಷೇತ್ರಕ್ಕೆ ಭೇಟಿ ನೀಡಿ ಸೇವೆ ಸಂದಾಯ ಮಾಡುತ್ತಾರೆ.