“ನಾಯಕ ಸರಿದಾರಿಯಲ್ಲಿ ನಮ್ಮನ್ನು ಮುನ್ನಡೆಸದಿದ್ದಲ್ಲಿ ನಾವು ಪ್ರತಿ ನಾಯಕರಾಗ ಬೇಕೇ ಹೊರತು ಖಳನಾಯಕರಲ್ಲ”. ಎಂದು ಸಂಘವನ್ನು ಉದ್ಘಾಟಿಸಿದ ಕನ್ನಡ ಉಪನ್ಯಾಸಕ ರಂಗಭೂಮಿ ಕಲಾವಿದರಾದ ಸುನಿಲ್ ಪಲ್ಲಮಜಲು ಹೇಳಿದರು.
2025- 26 ನೇ ಸಾಲಿನ ಕಾರ್ಮೆಲ್ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಕುಮಾರಿ ವಿದ್ಯಾ ಸ್ವಾಗತಿಸಿದರು. ಸಂಸ್ಥೆಯ ಪ್ರಾಚಾರ್ಯರಾದ ವ. ಭಗಿನಿ ಫೆಲ್ಸಿಟಾ ಎ. ಸಿ. ಪ್ರಮಾಣವಚನ ಬೋಧಿಸಿ ಮಾತನಾಡಿದರು.ವೇದಿಕೆಯಲ್ಲಿ ಸಂಸ್ಥೆಯ ಜಂಟಿ ಕಾರ್ಯದರ್ಶಿ ವ. ಭ. ಮರಿಯಾ ಪ್ರಿಯಾ ಎ.ಸಿ., ಸಂಘದ ಸಲಹೆಗಾರರಾದ ಶ್ರೀ ಸುರೇಶ್ ನಂದೊಟ್ಟು, ಶ್ರೀಮತಿ ಶ್ರೀ ವಿದ್ಯಾ, ಶ್ರೀಮತಿ ಕ್ಯಾರಲ್ ಲೋಬೊ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.ಕಾರ್ಯದರ್ಶಿ ಕು. ಐಶೆಲ್ ವಂದಿಸಿದರು. ಕು. ಪ್ರಜ್ಞಾ ನಿರೂಪಿಸಿದರು.