ಬಂಟ್ವಾಳ: ಬಂಟ್ವಾಳದ ಎಸ್.ವಿ.ಎಸ್. ದೇವಳ ಪ್ರೌಢಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಶಾಲಾ ಸಂಚಾರಕರು ಹಾಗೂ ಆಡಳಿತ ಮಂಡಳಿಯ ಸದಸ್ಯರು ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಿದರು .
ಶಾಲಾ ಸಂಚಾಲಕ ಬಿ ಸುರೇಶ್ ವಿ ಬಾಳಿಗ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಆರೋಗ್ಯಕರವಾದ ದೇಹದಲ್ಲಿ ಆರೋಗ್ಯಕರವಾದ ಮನಸ್ಸನ್ನು ರೂಪಿಸುವುದೇ ಯೋಗ ಶಿಕ್ಷಣದ ಮಹತ್ವ ಎಂದು ತಿಳಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಸುರೇಖಾ ಕೆ ಪ್ರಾಸ್ತಾವಿಕ ನುಡಿಯೊಂದಿಗೆ ಸ್ವಾಗತಿಸಿದರು. ಕಾರ್ಯಕ್ರಮವನ್ನು ಸಹ ಶಿಕ್ಷಕರಾದ ಪ್ರಶಾಂತ್ ನಿರೂಪಿಸಿದರು. ಸಹ ಶಿಕ್ಷಕರಾದ ದಾಮೋದರ್ ಪಡಿಯಾರ್. ಕೆ ವಂದಿಸಿದರು .ನಂತರ ಯೋಗ ಪ್ರದರ್ಶನದ ಪ್ರಾತ್ಯಕ್ಷಿಕೆ ಯನ್ನು ದೈಹಿಕ ಶಿಕ್ಷಣ ಶಿಕ್ಷಕರಾದ ದಿನೇಶ್ ಕುಮಾರ .ಡಿ ನಡೆಸಿಕೊಟ್ಟರು .