ಬಂಟ್ವಾಳ: ಬಂಟ್ವಾಳದ ಎಸ್.ವಿ.ಎಸ್. ಟೆಂಪಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಡೆಯಿತು. ಶಾಲಾ ಸಂಚಾಲಕ ಬಿ.ಸುರೇಶ್ ವಿ. ಬಾಳಿಗಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಯೊಗದ ಪ್ರತಿಜ್ಞೆ ಮತ್ತು ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಹೇಳಲಾಯಿತು. ಸುಮಾರು 600 ವಿದ್ಯಾರ್ಥಿಗಳು ಯೋಗಾಭ್ಯಾಸದಲ್ಲಿ ತೊಡಗಿಸಿಕೊಂಡರು. ಪತಂಜಲಿ ಯೋಗ ಕೇಂದ್ರದ ಸದಸ್ಯರಾದ ಉಮೇಶ್, ಗೀತಾ, ಸುರೇಖಾ, ವಿನಯ, ದೈಹಿಕ ಶಿಕ್ಷಣ ಶಿಕ್ಷಕರು ಮಾರ್ಗದರ್ಶನ ನೀಡಿದರು. ಶಾಲಾ ಅಡಳಿತ ಮಂಡಳಿ ಸದಸ್ಯರು, ಮುಖ್ಯೋಪಾಧ್ಯಾಯಿನಿ ರೋಶನಿ ತಾರಾ ಡಿಸೋಜ, ಸಹ ಮುಖ್ಯೋಪಾಧ್ಯಾಯಿನಿ ಜಾನಕಿ ರಾಜೇಶ್ ಉಪಸ್ಥಿತರಿದ್ದರು.