ಬಂಟ್ವಾಳ: ಮಂಚಿ ಕೊಳ್ನಾಡು ಸರಕಾರಿ ಪ್ರೌಢಶಾಲೆಯಲ್ಲಿ 11ನೇ ವಿಶ್ವ ಯೋಗ ದಿನಾಚರಣೆಯನ್ನು ನಡೆಸಲಾಯಿತು. ಯೋಗಾಸನದ ವಿವಿಧ ಭಂಗಿಗಳಲ್ಲಿ ನಿಂತು, ಕುಳಿತು ಹಾಗೂ ಮಲಗಿ ಉಸಿರಾಟದ ನಿಯಮಗಳನ್ನು ಅನುಸರಿಸಿ ಶಾಲೆಯ ಸುಮಾರು 307 ವಿದ್ಯಾರ್ಥಿಗಳು ಯೋಗಾಸನ ಮಾಡುವ ಮೂಲಕ ಯೋಗ ದಿನದ ಆಚರಣೆಯನ್ನು ಸಂಭ್ರಮಿಸಿದರು.ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಮತ್ತು ಮುಖ್ಯಕ್ಷಕರು ಎಲ್ಲಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಮುಖ್ಯೋಪಾಧ್ಯಾಯಿನಿ ಸುಶೀಲ ವಿಟ್ಲ ಯೋಗಾಸನದ ಬಗ್ಗೆ ಮಾಹಿತಿ ನೀಡಿದರು. ಶಾಲಾ ಶಿಕ್ಷಕ ವೃಂದವರು ಉಪಸ್ಥಿತರಿದ್ದರು. ಕಲಾಶಿಕ್ಷಕ ಜಗನ್ನಾಥ ಪಿ ಸ್ವಾಗತಿಸಿ ಶಿವಕುಮಾರ್ ಎಂ. ಜಿ. ವಂದಿಸಿದರು. ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ವಿನೋದ ಕಾರ್ಯಕ್ರಮ ನಿರ್ವಹಿಸಿದರು