ವೀರಕಂಭ ಮಜಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿಯ ಪ್ರಾಥಮಿಕ ಶಾಲೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಡೆಯಿತು. ಎಸ್ ಪಿ ವೈ ಎಸ್ ಎಸ್ ಕೆಲಿಂಜ ಶಾಖೆ ಶ್ರೀನಿಕೇತನ ತಂಡದಿಂದ ವಿದ್ಯಾರ್ಥಿಗಳಿಗೆ ಸರಳ ಯೋಗ ಅಭ್ಯಾಸ ಮತ್ತು ಪ್ರಾಣಾಯಾಮ ಅಭ್ಯಾಸದ ಬಗ್ಗೆ ರಾಮಣ್ಣ ಅವರು ತಿಳಿಸಿದರು. ಬಾಬಕಿರಣ್,, ಕುಸುಮ, ಮತ್ತು ಗೀತಾ ಉಪಸ್ಥಿತರಿದ್ದು ವಿದ್ಯಾರ್ಥಿಗಳಿಂದ ಪ್ರಾಣಾಯಾಮ ಮತ್ತು ಸರಳಯೋಗಾಸನಗಳನ್ನು ಮಾಡಿಸಿದರು. ದೈಹಿಕ ಶಿಕ್ಷಕ ಇಂದುಶೇಖರ್ ಅವರು ಸ್ವಾಗತಿಸಿ ಕಾರ್ಯಕ್ರಮ ನೇ ರೂಪಿಸಿದರು, ಶಿಕ್ಷಕಿ ಸಂಗೀತ ಶಮ೯ರವರು ಧನ್ಯವಾದ ನೀಡಿದರು.