ಬಾಳ್ತಿಲ ಗ್ರಾಮದ ದಾಸಕೋಡಿಯಲ್ಲಿ ಕೃಷಿ ತೋಟಗಳಿಗೆ ನೀರು ನುಗ್ಗಿದೆ. ಹೆದ್ದಾರಿ ಬದಿ ನೀರು ಹೋಗುವ ತೋಡು ಮುಚ್ಚಿಹೋಗಿದ್ದು ಇದಕ್ಕೆ ಕಾರಣ ಎಂದು ಸ್ಥಳೀಯರು ದೂರಿದ್ದಾರೆ. ಸ್ಥಳೀಯ ಕೃಷಿ ತೋಟ ಗಳ ಮಧ್ಯೆ ಹಾದು ಹೋಗುವ ರಸ್ತೆ ಯ ಬದುಗಳಲ್ಲಿ ಚರಂಡಿ, ಮೋರಿ ಕಣಿವೆಗಳ ದುರಸ್ತಿ ಕೆಲಸ ನಡೆಯದೆ ನೀರು ಹರಿದು ಹೋಗಲು ಸರಿಯಾದ ವ್ಯವಸ್ಥೆ ಇಲ್ಲದಾಗಿದೆ ಎಂದು ಸಾರ್ವಜನಿಕರು ಹೇಳಿದ್ದಾರೆ, ಜಾಗ ಸಮತಟ್ಟು ಮಾಡಿದ ಪ್ರದೇಶ ಗಳಿಂದ ಮಣ್ಣು ಮಿಶ್ರಿತ ನೀರು ಹರಿದು ಕೃಷಿ ನಾಶ ವಾಗುವ ಆತಂಕ ಎದುರಾಗಿದೆ. ಸ್ಥಳೀಯಾಡಳಿತ ಕೂಡಲೇ ಗಮನಹರಿಸಬೇಕು ಎಂದು ಒತ್ತಾಯಿಸಿದ್ದಾರೆ.