ಧಾರಾಕಾರವಾಗಿ ಕಳೆದೊಂದು ದಿನದಿಂದ ಸುರಿಯುತ್ತಿದ್ದ ಮಳೆಗೆ ಬಂಟ್ವಾಳ ತಾಲೂಕಿನ ಹಲವೆಡೆ ತೊಂದರೆಗಳಾಗಿವೆ.
ಅರಳ ಗ್ರಾಮದ ಪಂಬದಗದ್ದೆ ಎಂಬಲ್ಲಿನ ದಿನಕರ ಪಿ ಅವರ ಮನೆಯ ಮೇಲೆ ಮಣ್ಣು ಬಿದ್ದು ಮನೆಯ ಗೋಡೆಗೆ ಹಾನಿಯಾಗಿದೆ. ಅವರು ಪಕ್ಕದ ಮನೆ ಗೆ ಸ್ಥಳಾಂತರ ಗೊಂಡಿರುತ್ತಾರೆ. ಕರಿಯಂಗಳ ಗ್ರಾಮದ ಪುಂಚಮಿ ಸರೋಜಿನಿ ಅವರ ದನದ ಹಟ್ಟಿಗೆ ಗುಡ್ಡೆ ಜರಿದು ಹಟ್ಟಿ ಸಂಪೂರ್ಣ ಜರಿದು ಬಿದ್ದಿದೆ. ಸುಮಾರು 10 ದನಗಳಿಗೆ ಸಣ್ಣ ಪುಟ್ಟ ಗಾಯವಾಗಿದೆ. ಕಾವಳಪಡೂರು ಗ್ರಾಮದ ಆಲಂಪುರಿ ಎಂಬಲ್ಲಿ ರೇವತಿ ರಾಮ ಗಾಣಿಗ ಅವರ ಮನೆಯ ಮುಂಭಾಗ ಆವರಣ ಗೋಡೆ ಕುಸಿದಿದೆ.
ವಿಟ್ಲದ ಐಟಿಐ ಕಾಲೇಜು ಅಪಾಯದ ಅಂಚಿನಲ್ಲಿದೆ. ಅಲ್ಲಿಗೆ ತಾಗಿಕೊಂಡಿರುವ ಬರೆ ಕುಸಿದ ಕಾರಣ ಈ ಸಮಸ್ಯೆ ತಲೆದೋರಿದೆ. ಅಮ್ಟಾಡಿ ಗ್ರಾಮದ ಬಾಂಬಿಲ ಎಂಬಲ್ಲಿ ಬಾಂಬಿಲ ಮತ್ತು ತಲೆಂಬಿಲ ಸಂಪರ್ಕಿಸುವ ಗ್ರಾಮ ಪಂಚಾಯತ್ ರಸ್ತೆಗೆ ಗುಡ್ಡ ಕುಸಿದಿರುತ್ತದೆ. ಕಾವಳಪಡೂರು ಗ್ರಾಮದ ಆಲಂಪುರಿ ಎಂಬಲ್ಲಿ ರೇವತಿ ರಮೇಶ್ ಗಾಣಿಗರವರ ಮನೆಯ ಮುಂಭಾಗದ ಬಾವಿ ಹಾಗೂ ಆವರಣ ಗೋಡೆ ಕುಸಿದ್ದಿದ್ದು ಮನೆಯವರನ್ನು ಸಂಬಂಧಿಕರ ಮನೆಗೆ ಸ್ಥಳಾಂತರಿಸಲಾಗಿದೆ ಕರಿಯಂಗಳ ಗ್ರಾಮದ ಶಾಂತ ಎಂಬವರ ಮನೆಯ ತಡೆಗೋಡೆ ಕುಸಿದಿರುತ್ತದೆ. ಕಾಡಬೆಟ್ಟು ಗ್ರಾಮದ ಮೇಗಿನಮನೆ ಎಂಬಲ್ಲಿನ ರಿಚಾರ್ಡ್ ಡಿ ಸೋಜ ರವರ ಮನೆಗೆ ಅಡಿಕೆ ಮರ ಬಿದ್ದು ಹಾನಿಯಾಗಿರುತ್ತದೆ. ಕಾವಳಪಡೂರು ಗ್ರಾಮದ ಆಲಂಪುರಿ ಎಂಬಲ್ಲಿ ರೇವತಿ ರಾಮ ಗಾಣಿಗ ರವರ ಮನೆಯ ಮುಂಭಾಗದಲ್ಲಿ ಆವರಣ ಗೋಡೆ ಕುಸಿದಿರುತ್ತದೆ.
ಸೂರಿಕುಮೇರು ಸಮೀಪದ ಬಾಳ್ತಿಲ ಎಂಬಲ್ಲಿ ಬೆಳಿಗ್ಗೆ ಮತ್ತೆ ಎರಡು ವಾಣಿಜ್ಯ ಸಂಕೀರ್ಣಗಳು ಜಲಾವೃತಗೊಂಡಿದ್ದು, ವಿದ್ಯುತ್ ಕಂಬಗಳು ತುಂಡಾಗಿ ಬಿದ್ದಿದೆ. ಶನಿವಾರ ಬೆಳಿಗ್ಗೆ ವಾಸ್ತವ್ಯ ಇಲ್ಲದ ಮನೆ ಜಲಾವೃತಗೊಂಡಿದ್ದು ಸಮೀಪ ಮತ್ತೆರಡು ವಾಸ್ತವ್ಯ ದ ವಾಣಿಜ್ಯ ಸಂಕೀರ್ಣ ಗಳು ಜಲಾವೃತಗೊಂಳ್ಳುವ ಬಗ್ಗೆ ಎಚ್ಚರಿಕೆ ನೀಡಲಾಗಿತ್ತು. ಕಟ್ಟಡ ಸಹಿತ ಕೃಷಿ ತೋಟ ಹಾಗೂ ವಿದ್ಯುತ್ ಕಂಬಗಳಿಗೆ ಹಾನಿಯಾಗಿದ್ದು, ಈ ಪರಿಸರದಲ್ಲಿ ಕರೆಂಟ್ ಇಲ್ಲದೆ ಕತ್ತಲೆಯಲ್ಲಿರಬೇಕಾಗಿದೆ.