PHOTO: MANJU NEERESHWALYA
ಮಂಗಳೂರು ಮಹಾನಗರದಲ್ಲಿ ಮಳೆನೀರು ಹರಿದುಹೋಗಲು ಸರಿಯಾದ ದಿಕ್ಕಿಲ್ಲದೆ ರಸ್ತೆಗೇ ನುಗ್ಗಿದ ಪರಿಣಾಮ, ಪಡೀಲ್ ಅಂಡರ್ ಪಾಸ್, ಪಂಪ್ ವೆಲ್, ಮಂಗಳೂರು ನಗರದ ರಸ್ತೆಗಳು, ಹೆದ್ದಾರಿಯ ಮಧ್ಯೆ.. ರೈಲ್ವೆ ನಿಲ್ದಾಣ ಸಹಿತ ಬಹುತೇಕ ಮುಖ್ಯ ಭಾಗಗಳು ಶನಿವಾರ ಸಂಜೆ ವೇಳೆ ಜಲಾವೃತಗೊಂಡವು. ಸರಿಯಾದ ಸೂರಿಲ್ಲದ ಬಸ್ ನಿಲ್ದಾಣಗಳು, ಚರಂಡಿಗಳಿಲ್ಲದ ಫುಟ್ ಪಾತ್ ಗಳು, ತೆರೆದ ಚರಂಡಿಗಳು, ರಸ್ತೆಯವರೆಗೆ ಇಂಟರ್ಲಾಕ್ ಹಾಕಿಕೊಂಡಿರುವ ಸುಂದರ ಕಟ್ಟಡಗಳ ಪಾರ್ಕಿಂಗ್ ಜಾಗಗಳು.. ಹೀಗೆ ಕಂಡಕಂಡಲ್ಲಿ ನೀರು ನುಗ್ಗಿತು. ಕಳೆದ ಹತ್ತು ದಿನಗಳ ಹಿಂದೆ ಭಾರಿ ಮಳೆಯ ಸಂದರ್ಭ, ಅನಾಹುತಗಳೇ ಸಂಭವಿಸಿದರೂ ಇನ್ನೂ ನೀರು ಸರಿಯಾಗಿ ಹರಿದುಹೋಗಲು ವ್ಯವಸ್ಥೆ ಕಲ್ಪಿಸದ ಕಾರಣ ಹೀಗಾಗಿದೆ ಎಂದು ಸಾರ್ವಜನಿಕರು ಆಡಿಕೊಳ್ಳುವಂತಾಯಿತು. ಇಲ್ಲಿ ಕೆಲವು ಫೊಟೋ ಮತ್ತು ವಿಡಿಯೋಗಳನ್ನು ನೀಡಲಾಗಿದೆ.
PHOTO: MANJU NEERESHWALYA
PHOTO: MANJU NEERESHWALYA
PHOTO: SHREEKARA