ಸಜಿಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘ ನಿ ಬೊಳ್ಳಯಿ ಸಜಿಪಮೂಡ ವತಿಯಿಂದ ಸಿಬ್ಬಂದಿ ವರ್ಗದವರಿಗೆ ತರಬೇತಿ ಮಾಹಿತಿ ಕಾರ್ಯಾಗಾರ ಶನಿವಾರ ಸುಭಾಷ್ ನಗರದ ಶ್ರೀಗುರುಕಲ್ಯಾಣ ಮಂಟಪದಲ್ಲಿ ನಡೆಯಿತು.
ಸಂಘದ ಅಧ್ಯಕ್ಷರಾದ ಕೆ ಸಂಜೀವ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು ಕಾರ್ಯಾಗಾರವನ್ನು ಶ್ರೀಗುರು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷರಾದ ಕೆ ಹರಿಕೃಷ್ಣ ಬಂಟ್ವಾಳ ಉದ್ಘಾಟಿಸಿದರು. ತರಬೇತಿ ಕಾರ್ಯಗಾರವನ್ನು ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್ ನಿವೃತ್ತ ಸಿಇಒ ವಿಶ್ವನಾಥ್ ನಾಯರ್ ನೆರವೇರಿಸಿದರು. ಸಜಿಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷರಾದ ವಿಠ್ಠಲ ಬೆಳ್ಚಡ, ಚೇಳೂರು ನಿರ್ದೇಶಕರಾದ ಸುಂದರ ಪೂಜಾರಿ ಬೀಡಿನಪಾಲು, ರಮೇಶ್ ಅನ್ನಪ್ಪಾಡಿ, ಗಿರೀಶ್ ಕುಮಾರ್ ಪೆರ್ವ, ಜಯಶಂಕರ್ ಕಾನ್ಸಾಲೆ, ಚಿದಾನಂದ ಎಂ ಕಡೇಶ್ವಾಲ್ಯ, ಅರುಣ್ ಕುಮಾರ್ ಎಂ, ಆಶೀಶ್ ಪೂಜಾರಿ, ಕೆ ಸುಜಾತ ಎಂ, ವಾಣಿ ವಸಂತ್, ಸಿ ಇ ಒ ಮಮತಾ ಜಿ, ಶ್ರೀಗುರು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಸಿ ಇ ಒ ಚರಣ್ ಕುಮಾರ್. ಮೂರ್ತೆದಾರರ ಮಹಾಮಂಡಲದ ಸಿ ಇ ಒ ಕಿಶೋರ್ ಕುಮಾರ್ ಶಿವಗಿರಿ ಮಹಿಳಾ ಸೊಸೈಟಿ ನಿರ್ದೇಶಕರಾದ ಅಭಿನಯ ಚಿದಾನಂದ್ ಸಿ ಇ ಒ ರೇಖಾ ಹಾಗೂ ಶಾಖಾ ವ್ಯವಸ್ಥಾಪಕರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು