ಪುತ್ತೂರಿನಿಂದ ಉಪ್ಪಳ ಕಡೆಗೆ ಸಾಗುತ್ತಿದ್ದ ಕೆ.ಎಸ್.ಆರ್.ಟಿ.ಸಿ.ಬಸ್ ಒಂದು ಕನ್ಯಾನ ಬೈರಿಕಟ್ಟೆಯ ಕೆಳಗಿನ ತಿರುವಿನಲ್ಲಿ ಮಾರ್ಗ ಬಿಟ್ಟು ಹೊಂಡಕ್ಕೆ ವಾಲಿನಿಂತ ಘಟನೆ ಗುರುವಾರ ಸಂಜೆ ಸುಮಾರು 6.30ರ ವೇಳೆ ನಡೆಯಿತು. ವೇಗದ ಚಾಲನೆಯಿಂದ ಈ ರೀತಿಯ ಘಟನೆಯಾಗಿದೆ ಎಂದು ಪ್ರಯಾಣಿಕರು ದೂರಿದ್ದಾರೆ. ಅದೃಷ್ಟವಶಾತ್ ಬಸ್ ಪಲ್ಟಿಯಾಗಿಲ್ಲ.
ಪುತ್ತೂರಿನಿಂದ ಉಪ್ಪಳ ಕಡೆಗೆ ಸಾಗುತ್ತಿದ್ದ ಬಸ್ಸು ಬೈರಿ ಕಟ್ಟೆ, ಕೆಳಗಿನ ಕ್ರಾಸಿನಲ್ಲಿ ಮಾರ್ಗ ಬಿಟ್ಟು ಬದಿಗೆ ಸಾಗಿ ಹೊಂಡಕ್ಕೆ ಬೀಳುವುದರಿಂದ ಅದೃಷ್ಟವಶಾತ್ ಪಾರಾಯಿತು. ಬಸ್ಸಿನಲ್ಲಿ ಕನ್ಯಾನ, ಮುಗುಳಿ ಬಾಯಾರು, ಉಪ್ಪಳಕ್ಕೆ ಹೋಗುವ ಪ್ರಯಾಣಿಕರಿದ್ದರು.