ಬ್ರಹ್ಮರಕೂಟ್ಲುವಿನಲ್ಲಿ ಸುಮಾರು 12 ವರ್ಷಗಳಿಗೂ ಅಧಿಕ ಸಮಯದಿಂದ ಕಾರ್ಯಾಚರಿಸುತ್ತಿರುವ ಟೋಲ್ ಸಂಗ್ರಹ ಕೇಂದ್ರ ವಿರುದ್ಧ ಹಲವು ಹೋರಾಟಗಳು ನಡೆದಿವೆ. ಇದೀಗ ಮತ್ತೊಂದು ಹೋರಾಟಕ್ಕೆ ಜಿಪಂ ಮಾಜಿ ಉಪಾಧ್ಯಕ್ಷ ಎಂ.ತುಂಗಪ್ಪ ಬಂಗೇರ ಸಜ್ಜಾಗಿದ್ದು, ಸಮಾನ ಮನಸ್ಕರ ಸಭೆಯೊಂದನ್ನು ಬಿ.ಸಿ.ರೋಡಿನಲ್ಲಿ ನಡೆಸಿದರು.
ಬಿ.ಸಿ.ರೋಡಿನಲ್ಲಿ ನಡೆದ ಸಮಾನಮನಸ್ಕರ ಸಮಾಲೋಚನಾ ಸಭೆಯಲ್ಲಿ ಹಲವು ವಿಷಯಗಳ ಕುರಿತು ಚರ್ಚೆ ನಡೆಯಿತು. ಸ್ಥಳೀಯ ನೊಂದಣಿ ಹೊಂದಿದ ವಾಹನಗಳಿಂದ ಸುಂಕ ವಸೂಲಿ ಮಾಡಬಾರದು ಶಾಸಕರು ,ಸಂಸದರನ್ನು ಬೇಟಿ ಮಾಡಿ ಅವರ ಮುಖೇನ ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಬೇಡಿಕೆಗಳನ್ನು ಮಂಡಿಸುವುದೇ ಮೊದಲಾದ ನಿರ್ಣಯಗಳನ್ನು ಮಾಡಲಾಯಿತು. ಮಧುಕರ ಬಂಗೇರ ರಾಯಿ, ಕರುಣೇಂದ್ರ ಕೊಂಬ್ರಬೈಲ್, ಟಿ.ಹರೀಂದ್ರ ಪೈ, ಶಂಕರ ಶೆಟ್ಟಿ ಬೆದ್ರಮಾರ್, ಯಶೋಧರ ಶೆಟ್ಟಿ ದಂಡೆ, ಧನಂಜಯ ಶೆಟ್ಟಿ ಸರಪಾಡಿ, ಶಾಂತಪ್ಪ ಪೂಜಾರಿ ಹಟದಡ್ಕ, ಹರೀಶ್ ಶೆಟ್ಟಿ ನಯನಾಡು, ಜಿನೇಂದ್ರ ಜೈನ್ ವಗ್ಗ, ಪುಷ್ಪಾನಂದ ಮೂರ್ಜೆ, ಶ್ರೀನಿವಾಸ ಪೂಜಾರಿ, ಗಿರೀಶ್ ಸಾಲ್ಯಾನ್ ಹೆಗ್ಡೆಬೆಟ್ಟುಗುತ್ತು, ಕಿಶೋರ್ ಹಟತ್ತೋಡಿ, ದಯಾನಂದ ರಾಯಿ ಉಪಸ್ಥಿತರಿದ್ದರು.ಪ್ರಭಾಕರ ಪಿ.ಎಂ. ಸ್ವಾಗತಿಸಿ, ವಂದಿಸಿದರು.