ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಮೂಲಕ ಬಂಟ್ವಾಳ ತಾಲ್ಲೂಕಿನ ವಾಮದಪದವು ಸದಾಶಿವ ಪೂಜಾರಿಯವರ ಮನೆಯಲ್ಲಿ ರೈತರಿಗೆ ರೈತ ಕ್ಷೇತ್ರ ಪಾಠ ಶಾಲೆ ಮೂಲಕ ಯಂತ್ರಶ್ರೀ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಅಡಿಕೆ ಕೃಷಿ ರಾಜ್ಯದಲ್ಲಿ ವಿಸ್ತರಣೆ ಆಗಿದೆ. ಹಾಗೆಯೇ ಭತ್ತದ ಬೇಸಾಯಕ್ಕೆ ಎಲ್ಲಾ ರೈತರು ತನ್ನ ಮನೆಗೆ ಬೇಕಾಗುವಷ್ಟು ಆದರೂ ಭತ್ತ ಬೆಳೆಯಬೇಕು. ಭತ್ತದ ಕೃಷಿ ನಾಶವಾಗಬಾರದು ಎಂದು ತಿಳಿಸಿದರು. ಪ್ರಸ್ತುತ ಕೃಷಿ ಮಾಡಲು ಕಷ್ಟ ಇಲ್ಲ ತಂತ್ರಜ್ಞಾನದ ಯುಗ ಪ್ರಾರಂಭವಾಗಿದೆ. ಶ್ರೀ ಕ್ಷೇತ್ರದ ಧರ್ಮಸ್ಥಳ ಮತ್ತು ಕೃಷಿ ಇಲಾಖೆ ಮೂಲಕ ಕೃಷಿ ಯಂತ್ರ ಧಾರೆ ಮೂಲಕ ಉಳುಮೆ ಮೂಲಕ ಭಿತ್ತನೆಯ ಮೂಲಕ ಭತ್ತ ಕಟಾವು ಮಾಡಿ ಬೈಹುಲ್ಲು ಕಟ್ಟುವ ತನಕದ ಎಲ್ಲಾ ಯಂತ್ರಗಳು ಕೇಂದ್ರದಲ್ಲಿ ಲಭ್ಯವಿದೆ. ರಾಜ್ಯದಲ್ಲಿ 87 ತಾಲ್ಲೂಕಿನಲ್ಲಿ 1 ಲಕ್ಷ 84000 ಕುಟುಂಬದಲ್ಲಿ ಯಂತ್ರಶ್ರೀ ಕಾರ್ಯಕ್ರಮ ಅನುಷ್ಠಾನ ಮಾಡಲಾಗಿದೆ. ಕಳೆದ ವರ್ಷ ರಾಜ್ಯದಲ್ಲಿ 21000 ಎಕರೆ ನಾಟಿ ಮಾಡಲಾಗಿದೆ. ಬಂಟ್ವಾಳ ತಾಲ್ಲೂಕಿನ ಕಳೆದ ವರ್ಷ 500 ಎಕರೆ ನಾಟಿ ಮಾಡಿದ್ದು ಪ್ರಸ್ತುತ ವರ್ಷದಲ್ಲಿ ಇದೆ ಗುರಿಯನ್ನು ಇಟ್ಟುಕೊಳ್ಳಲಾಗಿದೆ ಎಂದು ತಿಳಿಸಿದರು.2026 ರೈತ ಮಹಿಳೆಯರ ವರ್ಷ ಎಂದು ಘೋಷಣೆಯಾಗಿದೆ ಇನ್ನಷ್ಟು ಕೃಷಿಯಲ್ಲಿ ಆಸಕ್ತಿ ಬರಲಿ ಎಂದು ಹಾರೈಸಿದರು.ಹಾಗೆಯೇ ಈ ಕಾರ್ಯಕ್ರಮ ದಲ್ಲಿ ಯಂತ್ರಶ್ರೀ ಪೂರಕವಾಗಿ ಮಣ್ಣು ತಯಾರಿ, ಬೀಜ ತಯಾರಿ, ಸಸಿ ಮಾಡಿ ತಯಾರಿಯನ್ನು ಪ್ರಾಯೋಗಿಕವಾಗಿ ತೋರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ತಾಲ್ಲೂಕಿನ ಯೋಜನಾಧಿಕಾರಿ ಜಯನಂದ, ಸಿಹೆಚ್ ಎಸ್ ಸಿ ಯೋಜನಾಧಿಕಾರಿ ಮೋಹನ್ ನವೀನ್ ಚಂದ್ರ ಶೆಟ್ಟಿ ಸದಸ್ಯರು ಜನಜಾಗೃತಿ ವೇದಿಕೆ ವಗ್ಗ, ಸದಾಶಿವ ಪೂಜಾರಿ ಕೃಷಿಕರು , ಭಾಸ್ಕರ್ ಕೃಷಿ ಮೇಲ್ವಿಚಾರಕರು, ಸವಿತಾ ಮೇಲ್ವಿಚಾರಕರು, ಶಿವಕುಮಾರ್ ಪ್ರಬಂಧಕರು, ಪ್ರಕಾಶ್, ಚಂದಪ್ಪ, ಪ್ರಶಾಂತ್, ಶಂಕರ್ ಆನಂದ್ ಉಪಸ್ಥಿತರಿದ್ದರು