ಕಲಬುರಗಿಯ ಶ್ರೀ ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ ಮಾನವೀಯ ಮತ್ತು ಆಧ್ಯಾತ್ಮಿಕ ಮಾರ್ಗದರ್ಶಕ ಹಾಗೂ ಕುಲಾಧಿಪತಿ ಮಧುಸೂಧನ ಸಾಯಿ ಅವರು ಜೂನ್ 12ರಂದು ಕಲ್ಲಡ್ಕಕ್ಕೆ ಆಗಮಿಸಲಿದ್ದಾರೆ. ಅಂದು ಬೆಳಗ್ಗೆ 10 ಗಂಟೆಗೆ ಕಲ್ಲಡ್ಕ ವಿದ್ಯಾಕೇಂದ್ರದ ಆವರಣದಲ್ಲಿ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಶ್ರೀರಾಮ ಇಂಗ್ಲೀಷ್ ಮೀಡಿಯಂ ಸ್ಕೂಲ್ ನ ನೂತನ ಭವನವಾದ ವಿಕ್ರಮಾದಿತ್ಯ ಲೋಕಾರ್ಪಣೆ ಉದ್ಘಾಟನೆ 11 ಗಂಟೆಗೆ ಶ್ರೀರಾಮ ಮಂದಿರದಲ್ಲಿರುವ ರಾಮಾಂಗಣದಲ್ಲಿ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಅಧ್ಯಕ್ಷತೆಯಲ್ಲಿ ಉದ್ಯಮಿಗಳಾದ ಅಶೋಕ್ ಖೇಣಿ ಹಾಗು ಶಶಿಧರ ಶೆಟ್ಟಿ ಬರೋಡಾ ಉಪಸ್ಥಿತಿಯಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.