ಮಂಗಳೂರಿನ ಕೃಷಿ ವಿಜ್ಞಾನ ಕೇಂದ್ರ ವತಿಯಿಂದ ಬಂಟ್ವಾಳ ತಾಲೂಕಿನ ಸಜೀಪಮೂಡ ಗ್ರಾಮದಲ್ಲಿ ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಕಾರ್ಯಕ್ರಮದ ಅಂಗವಾಗಿ ಮುಂಗಾರು ಹಂಗಾಮಿನ ಬೆಳೆಗಳ ಕುರಿತು ರೈತರಿಗೆ ಮಾಹಿತಿ ಶಿಬಿರ ನಡೆಯಿತು.
ಕೃಷಿ ವಿಜ್ಞಾನ ಕೇಂದ್ರದ ಬೇಸಾಯಶಾಸ್ತ್ರ ವಿಜ್ಞಾನಿಗಳಾದ ಡಾ. ಹರೀಶ್ ಶೆಣೈ ಅಭಿಯಾನ ಉದ್ದೇಶಗಳನ್ನು ತಿಳಿಸಿ ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ಪ್ರಮುಖ ಬೆಳೆಗಳಾದ ಭತ್ತ, ಆಡಿಕೆ, ತೆಂಗು ಹಾಗೂ ಕಾಳುಮೆಣಸಿನಲ್ಲಿ ಮುಂತಾದವುಗಳಲ್ಲಿ ಕೈಗೊಳಬೇಕಾದ ಬೇಸಾಯ ಕ್ರಮಗಳ ಕುರಿತು ವಿಸ್ಕೃತ ಮಾಹಿತಿಯನ್ನು ನೀಡಿದರು.
ಸಜೀಪಮೂಡ ಗ್ರಾಮದ ಪ್ರಗತಿಪರ ಕೃಷಿಕರು ಹಾಗೂ ಏತ ನೀರಾವರಿ ಸಂಘದ ಅಧ್ಯಕ್ಷರಾದ ಶ್ರೀಕಾಂತ ಶೆಟ್ಟಿ, ಕಾರ್ಯದರ್ಶಿ ಮನೋಜ್ ಆಳ್ವ, ಪ್ರಗತಿಪರ ಕೃಷಿಕರಾದ ನವೀನ್ ಕುಮಾರ್ ಎಮ್.ಜಿ., ಕೆ.ವೆಂಕಟರಮಣ, ಕೆ. ವಿರೇಂದ್ರ, ಸೀತರಾಮ ಅಗೋಳಿಬೆಟ್ಟು ಪದ್ಮನಾಭ ಕುಂದರ್ ಮುಂತಾದವರು ಭಾಗವಹಿಸಿ ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು.