ಬಂಟ್ವಾಳ : ತಾಲೂಕಿನ ಪಾಣೆಮಂಗಳೂರಿನಲ್ಲಿ ಸಂಭ್ರಮದ ಬಕ್ರೀದ್ ಆಚರಣೆ ಶನಿವಾರ ನಡೆಯಿತು. ಆಲಡ್ಕ ಮುಹಿಯುದ್ದೀನ್ ಜುಮಾ ಮಸೀದಿ ಮುದರ್ರಿಸ್ ಶೈಖುನಾ ಅಲ್ ಹಾಜ್ ಬಿ ಎಚ್ ಅಬೂಸ್ವಾಲಿಹ್ ಉಸ್ತಾದ್ ಈದ್ ನಮಾಝ್ ಹಾಗೂ ಖುತುಬಾ ನೇತೃತ್ವ ವಹಿಸಿದ್ದರು.
ಬಳಿಕ ಈದ್ ಸಂದೇಶ ನೀಡಿದ ಅವರು, ಪರಸ್ಪರ ಸೌಹಾರ್ದತೆಯಿಂದ ಬಾಳುವುದರ ಜೊತೆಗೆ ಆರಾಧನಾ ಕರ್ಮಗಳನ್ನು ವೃದ್ದಿಸುವ ಮೂಲಕ ಸೃಷ್ಟಿಕರ್ತನ ಕೃಪೆ ಸಂಪಾದಿಸಲು ಪಣ ತೊಡಲು ಈದ್ ಪ್ರೇರಣೆಯಾಗಲಿ ಎಂದು ಹಾರೈಸಿದರು.
ಬಳಿಕ ಮುಸ್ಲಿಂ ಬಂಧುಗಳು ಪರಸ್ಪರ ಆಲಿಂಗನ ಹಾಗೂ ಹಸ್ತ ಲಾಘವದ ಮೂಲಕ ಬಕ್ರೀದ್ ಶುಭಾಶಯ ಹಂಚಿಕೊಂಡರು.