ಕೈ ಕಾಲು ತೊಳೆಯುವ ವೇಳೆ ಕೆರೆಗೆ ಬಿದ್ದು ಕಾಲೇಜು ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ಕಾರಿಂಜದಲ್ಲಿ ಶನಿವಾರ ಬೆಳಿಗ್ಗೆ ನಡೆದಿದೆ. ವಗ್ಗ ಕಾರಿಂಜ ಕ್ರಾಸ್ ನಿವಾಸಿ ಶ್ರೀಧರ್ ಮೂಲ್ಯ ಅವರ ಮಗ ಚೇತನ್ ( 19) ಮೃತಪಟ್ಟ ವಿದ್ಯಾರ್ಥಿ.
ಕಾರಿಂಜೇಶ್ವರ ದೇವಾಲಯದ ಕೆಳಗೆ ಇರುವ ಕೆರೆಯಲ್ಲಿ ಕಾಲು ತೊಳೆಯಲು ಇಳಿದ ವೇಳೆ ಆಯತಪ್ಪಿ ಕೆರೆಗೆ ಬಿದ್ದು ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ. ಚೇತನ್ ಪ್ರತಿ ಶನಿವಾರ ಕಾರಿಂಜ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆಯುತ್ತಿದ್ದ, ಇಂದು ಅದೇ ರೀತಿ ಸ್ನೇಹಿತ ನ ಜೊತೆಗೆ ದೇವಸ್ಥಾನಕ್ಕೆ ತೆರಳಿದ್ದ. ಈ ವೇಳೆ ದೇವಾಲಯದ ಕೆರೆಯಲ್ಲಿ ಕಾಲು ತೊಳೆಯಲು ಮೆಟ್ಟಿಲು ಇಳಿಯುತ್ತಿದ್ದಂತೆ ಕಾಲು ಜಾರಿ ಕೆರೆಯೊಳಗೆ ಚೇತನ್ ಬಿದ್ದಿದ್ದಾನೆ.