ಬಂಟ್ವಾಳ: ಗುಡ್ಡೆಯಂಗಡಿ ನೂರೂದ್ದೀನ್ ಜುಮಾ ಮಸೀದಿಯಲ್ಲಿ ಈದ್ ಖುತಬ ಹಾಗೂ ಈದ್ ನಮಾಝ್ ನಡೆಯಿತು. ಈ ಸಂದರ್ಭದಲ್ಲಿ ಖತೀಬರಾದ ಅಸೀಫ್ ಧಾರಿಮಿ ಈದ್ ಶುಭಾಶಯ ತಿಳಿಸಿದರು. ಬಂಟ್ವಾಳ ಪುರಸಭೆ ಸದಸ್ಯ ಅಬುಬಕ್ಕರ್ ಸಿದ್ದೀಕ್, ಮಸೀದಿ ಅಧ್ಯಕ್ಷ ಅಬುಬಕ್ಕರ್ ಮೆಲ್ಕಾರ್, ಪ್ರಮುಖರಾದ ಮೊಹಮ್ಮದ್ ಹನೀಫ್, ಅಬ್ದುಲ್ ಮಜೀದ್ ಬೋಗೋಡಿ, ಅಬ್ದುಲ್ ಫಾರೂಕ್ , ಮಹಮ್ಮದ್ ಅನ್ಸಾರ್ ಬೋಗೋಡಿ, ಸಿರಾಜ್ ಸಜೀಪ, ಸಾದೀಕ್ ಗುಡ್ಡೆಅಂಗಡಿ ಸಹಿತ ನೂರಾರು ಮಂದಿ ಈದ್ ಸಂಭ್ರಮದ ನಮಾಜ್ ನಲ್ಲಿ ಭಾಗವಹಿಸಿ ನಾಡಿನ ಸಮಸ್ತ ಜನತೆಗೆ ಶುಭಹಾರೈಸಿದರು.
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…