ಬಂಟ್ವಾಳ: ಏಡೆಬಿಡದೆ ಸುರಿಯುತ್ತಿದ್ದ ಜಡಿಮಳೆಯ ನಡುವೆ,ಭಕ್ತಸಮೂಹದ ಸಮಕ್ಷಮದಲ್ಲಿ ಬಂಟ್ವಾಳ ತಾಲೂಕಿನ ನಾವೂರು ಗ್ರಾಮದ ಅಗ್ರಹಾರ ಬೀದಿ ಶ್ರೀಗೋಪಾಲಕೃಷ್ಣ ದೇವಸ್ಥಾನದಲ್ಲಿ ಶ್ರೀ ದೇವರಿಗೆ ಬ್ರಹ್ಮಕುಂಭಾಭಿಷೇಕ ಹಾಗೂ ನೂತನ ಬ್ರಹ್ಮರಥದ ಸಮರ್ಪಣೆಯು ಶುಕ್ರವಾರ ಮಧ್ಯಾಹ್ನ ಸಂಭ್ರಮದಿಂದ ನೆರವೇರಿತು.
ಎಡಪದವು ನಾರಾಯಣ ತಂತ್ರಿಗಳ ನೇತೃತ್ವ ದೇವಳದ ಪ್ರಧಾನ ಅರ್ಚಕರಾದ ವೇದ ಮೂರ್ತಿ ಸುದರ್ಶನ್ ಬಲ್ಲಾಳ್ ಪೌರೋಹಿತ್ಯದಲ್ಲಿ ವಿವಿಧ ವೈಧಿಕ ವಿಧಿ ವಿಧಾನಗಳು ನಡೆದು ಬಳಿಕ ಶ್ರೀಗೋಪಾಲಕೃಷ್ಣ ಹಾಗೂ ಪರಿವಾರ ದೇವರಿಗೆ ಬ್ರಹ್ಮಕುಂಭಾಭಿಷೇಕ ಹಾಗೂ ನೂತನ ಬ್ರಹ್ಮರಥದ ಸಮರ್ಪಣೆಯು ನೆರವೇರಿತು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ, ದೇವಳದ ಬ್ರಹ್ಮಕಲಶೋತ್ಸವ ಸಮಿತಿಅಧ್ಯಕ್ಷ ರಾಕೇಶ್ ಮಲ್ಲಿ, ಗೌರವಾಧ್ಯಕ್ಷ ಸತೀಶ್ ಭಂಡಾರಿ ಕುಳತ್ತಬೆಟ್ಟು, ಕಾರ್ಯಾಧ್ಯಕ್ಷ ಸೀತಾರಾಮ್ ಸಾಲಿಯಾನ್ ಅಗ್ರಹಾರ್, ಕಾರ್ಯದರ್ಶಿ ಸದಾನಂದ ಗೌಡ ನಾವೂರು, ನಾವೂರು ಗ್ರಾ.ಪಂ.ಅಧ್ಯಕ್ಷೆ ಇಂದಿರಾ, ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಪದ್ಮಶೇಖರ ಜೈನ್ ಬಲ್ಲೋಡಿಗುತ್ತು, ಕಾರ್ಯದರ್ಶಿ ಉಮಾಶಂಕರ ಬಂಟ್ವಾಳ, ಗೌರವ ಸಲಹೆಗಾರ ಮುರಳೀಧರ ಭಟ್ ಸಹಿತ ವಿವಿಧ ಸಮಿತಿ ಪದಾಧಿಕಾರಿಗಳು ಹಾಜರಿದ್ದರು. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದ ಪ್ರಯುಕ್ತ ನೃತ್ಯವೈವಿಧ್ಯ ಹಾಗೂ ನೃತ್ಯರೂಪಕ ನಡೆಯಿತು.ರಾತ್ರಿ ಶ್ರೀದೆರವರಿಗೆ ರಂಗಪೂಜೆ ಹಾಗೂ ಸಾಂಪ್ರದಾಯಿಕವಾಗಿ ರಥಬೀದಿಯಲ್ಲಿ ನೂತನ ಬ್ರಹ್ಮರಥವನ್ನು ಎಳೆಯಲಾಯಿತು.