ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ತುಂಬೆ ವಳವೂರು ಬಂಟರ ಭವನದ ಬಳಿ ಇರುವ ಸೇತುವೆ ಮೇಲ್ಭಾಗದಲ್ಲಿ ಮಳೆ ನೀರಿನ ರಭಸಕ್ಕೆ ಸೇತುವೆ ಮೇಲ್ಭಾಗದಲ್ಲಿರುವ ಪಾದಚಾರಿ ರಸ್ತೆಯ ಕಾಂಕ್ರೀಟ್ ಕೆಳಗೆ ಬಿದ್ದು ದೊಡ್ಡ ಹೊಂಡ ನಿರ್ಮಾಣಗೊಂಡಿರುವ ವಿಚಾರವನ್ನು ಭಾನುವಾರ ಸಂಜೆ ಬಂಟ್ವಾಳನ್ಯೂಸ್ (www.bantwalnews.com) ಪ್ರಕಟಿಸಿತ್ತು. ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರಿಗೆ ಹಾಗೂ ಆ ಭಾಗದಲ್ಲಿರುವ ಪಾದಚಾರಿಗಳಿಗೆ ಅಪಾಯವಿದೆ. ಸಂಬಂದಪಟ್ಟ ಇಲಾಖೆ ಸೂಕ್ತ ಕ್ರಮ ಕೈಗಳೊಳ್ಳಬೇಕಾಗಿ ಸಾರ್ವಜನಿಕರು ಒತ್ತಾಯಿಸಿದ್ದರು. ಇದಕ್ಕೆ ಕೂಡಲೇ ತಹಸೀಲ್ದಾರ್ ಅರ್ಚನಾ ಭಟ್ ನೇತೃತ್ವದಲ್ಲಿ ಅಧಿಕಾರಿಗಳು ಸ್ಪಂದಿಸಿದ್ದಾರೆ. ಹೊಂಡದ ಬಳಿ ರಾತ್ರಿ ವೇಳೆ ಯಾರೂ ಸಾಗದಂತೆ ಸುರಕ್ಷತಾ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ರಾತ್ರಿಯೂ ಧಾರಾಕಾರ ಮಳೆ ಸುರಿಯುತ್ತಿದ್ದು, ಸಾರ್ವಜನಿಕರು ಸಮಸ್ಯೆಗಳೇನಾದರೂ ಇದ್ದರೆ, ಬಂಟ್ವಾಳದ ಕಂಟ್ರೋಲ್ ರೂಮ್ ಸಂಖ್ಯೆ 7337669102 ಹಾಗೂ ಜಿಲ್ಲಾ ತುರ್ತು ಸೇವೆ ಟೋಲ್ ಫ್ರೀ ಸಂಖ್ಯೆ 1077 / 0824-2442590 ಸಂಪರ್ಕಿಸಬಹುದು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಪ್ರಕಟಣೆ ತಿಳಿಸಿದೆ.