ಬಸ್ ನಿಂದ ಇಳಿಯುವ ವೇಳೆ ಮಹಿಳೆಯೊಬ್ಬರು ಬಸ್ ನಿಂದ ಬಿದ್ದು ಗಾಯಗೊಂಡಿದ್ದಾರೆ. ಕಡೂರು ರಾಷ್ಟ್ರೀಯ ಹೆದ್ದಾರಿಯ ಬಂಟ್ವಾಳದ ತುಂಬ್ಯ ಜಂಕ್ಷನ್ ನಲ್ಲಿ ಈ ಘಟನೆ ನಡೆದಿದೆ. ಲಕ್ಷ್ಮೀ ಗಾಯಗೊಂಡವರು.
ಬಿಸಿರೋಡು ಕಡೆಯಿಂದ ಬೆಳ್ತಂಗಡಿ ಕಡೆಗೆ ಸಂಚರಿಸುತ್ತಿದ್ದ ಕೆ.ಎಸ್.ಆರ್.ಟಿ.ಸಿ.ಬಸ್ ನಿಂದ ಬಿದ್ದು ಗಾಯಗೊಂಡಿದ್ದಾರೆ. ತುಂಬ್ಯಾ ಜಂಕ್ಷನ್ ನ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಹಿಂದಿನ ಬಾಗಿಲಿನಿಂದ ಇಳಿಸಲಾಗುತ್ತಿತ್ತು. ಈ ಸಂದರ್ಭ ಲಕ್ಮೀ ಎಂಬವರು ಇಳಿಯುತ್ತಿದ್ದಂತೆ ಬಸ್ ನ್ನು ಅದರ ಚಾಲಕ ಒಮ್ಮೆಲೇ ಮುಂದೆ ಚಲಾಯಿಸಿದ ಪರಿಣಾಮ ಮಹಿಳೆ ಡಾಮರು ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ. ಅವರನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಬಳಿಕ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿಲಾಗಿದೆ. ಬಂಟ್ವಾಳ ಟ್ರಾಫಿಕ್ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ