ಬಂಟ್ವಾಳ ಪುರಸಭೆ ವ್ಯಾಪ್ತಿಯ ಬಿ ಕಸಬ ಗ್ರಾಮದ 3ನೇ ವಾರ್ಡಿನ ಪಲ್ಲಿಕಂಡ ಎಂಬಲ್ಲಿ ಮಾಜಿ ಪುರಸಭೆ ಸದಸ್ಯರಾದ ಬಾಝಿಲ್ ಪಿಂಟೋ ಎಂಬವರ ಮನೆ ಮಂಗಳವಾರ ಬೆಳಗ್ಗೆ ಸುರಿದ ಮಳೆಗೆ ಸಂಪೂರ್ಣ ಕುಸಿದಿದೆ. ಬಂಟ್ವಾಳ ಪುರಸಭಾಧ್ಯಕ್ಷ ಬಿ.ವಾಸು ಪೂಜಾರಿ ಲೊರೆಟ್ಟೊ, ಪುರಸಭೆ ಮುಖ್ಯಾಧಿಕಾರಿ ನಜೀರ್ ಅಹಮದ್ ಮತ್ತು ಕಿರಿಯ ಅಭಿಯಂತರ ಡೊಮಿನಿಕ್ ಡಿಮೆಲ್ಲೊ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸರಕಾರದಿಂದ ಸಿಗುವ ಸಹಾಯಧನವನ್ನು ಕಂದಾಯ ಇಲಾಖೆಯ ಮುಖಾಂತರ ಒದಗಿಸುವ ಭರವಸೆಯನ್ನು ಅಧ್ಯಕ್ಷ ವಾಸು ಪೂಜಾರಿ ನೀಡಿದರು