ಬಿ.ಸಿ.ರೋಡಿನ ಶ್ರೀ ಚಂಡಿಕಾಪರಮೇಶ್ವರಿ ದೇವಿ ದೇವಸ್ಥಾನದಲ್ಲಿ ಮೇ 18 ಮತ್ತು 19ರಂದು ಕ್ಷೇತ್ರ ಪರಿಸರದಲ್ಲಿರುವ ಅಶ್ವತ್ಥ ಸಾನಿಧ್ಯದಲ್ಲಿ ಬ್ರಹ್ಮಶ್ರೀ ನೀಲೇಶ್ವರ ಪದ್ಮನಾಭ ತಂತ್ರಿಗಳ ಮಾರ್ಗದರ್ಶನದಲ್ಲಿ ಅಶ್ವತ್ಥ ಉಪನಯನ ಹಾಗೂ ವಿವಾಹ ಸಂಸ್ಕಾರ ಕಾರ್ಯಕ್ರಮಗಳು ನಡೆದವು.
18ರಂದು ಸಂಜೆ ಪ್ರಾರ್ಥನೆ, ಆರೂಢ ಪರಿಗ್ರಹ, ಪುಣ್ಯಾಹ, ಆರೂಢ ಶೂದ್ಧಿ, ವಾಸ್ತು ರಕ್ಷೋಘ್ನ ಹೋಮ, ವಾಸ್ತುಬಲಿ ಕಾರ್ಯಕ್ರಮಗಳು ನಡೆದರೆ, 19ರಂದು ಬೆಳಗ್ಗೆ ಗಣಪತಿ ಹೋಮ, ಬಳಿಕ ಅಶ್ವತ್ಥ ಉಪನಯನ, ಹಾಗೂ ವಿವಾಹ ಸಂಸ್ಕಾರ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ ಪೂಜೆ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಬಿ.ಸಿ.ರೋಡಿನ ನ್ಯೂ ವಿಜಯಾ ಸ್ವೀಟ್ಸ್ ನ ಎಚ್. ಪ್ರಶಾಂತ್ ಭಟ್ ದಂಪತಿ ಸೇವಾ ಕಾರ್ಯ ನಡೆಸಿಕೊಟ್ಟರು. ಈ ಸಂದರ್ಭ ಆಡಳಿತ ಸಮಿತಿ ಅಧ್ಯಕ್ಷ ಲೋಕನಾಥ ಶೆಟ್ಟಿ ಹಾಗೂ ಸದಸ್ಯರು, ದೇವಸ್ಥಾನದ ಭಕ್ತರು ಉಪಸ್ಥಿತರಿದ್ದರು.