ಉಡುಪಿ: ಒಂದು ಕೈಯಲ್ಲಿ ಚಕ್ರ, ಇನ್ನೊಂದು ಕೈಯಲ್ಲಿ ಸಿಂಧೂರ ಬಟ್ಟಲು. ಇವನ್ನು ಹಿಡಿದುಕೊಂಡ ಉಡುಪಿಯ ಶ್ರೀಕೃಷ್ಣ. ಉಡುಪಿ ಪರ್ಯಾಯ ಶ್ರೀ ಪುತ್ತಿಗೆ ಕಿರಿಯ ಶ್ರೀಗಳು ಆಪರೇಷನ್ ಸಿಂದೂರ ಕಾರ್ಯಾಚರಣೆಯ ದ್ಯೋತಕವಾಗಿ ಶ್ರೀಕೃಷ್ಣನ ಅಲಂಕಾರವನ್ನು ಹೀಗೆ ಮಾಡಿದ್ದರು.
ಪರ್ಯಾಯ ಕಿರಿಯ ಶ್ರೀಪಾದರಿಂದ ಪ್ರತಿದಿನ ಶ್ರೀಕೃಷ್ಣನಿಗೆ ವಿಶೇಷ ಅಲಂಕಾರ ಮಾಡಲಾಗುತ್ತದೆ. ಭಾರತದ ಮೇಲೆ ಪಾಕಿಸ್ತಾನ ಪ್ರೇಷಿತ ಉಗ್ರಗಾಮಿಗಳು ಪಹಲ್ ಗಾಂವ್ ನಲ್ಲಿ 26 ಮಂದಿ ಹಿಂದುಗಳನ್ನು ನಿರ್ದಯವಾಗಿ ಹತ್ಯೆ ಮಾಡಿದ್ದಕ್ಕಾಗಿ ಭಾರತ ಪ್ರಬಲ ಪ್ರತಿರೋಧವನ್ನು ತೋರಿತ್ತು. ಆಪರೇಷನ್ ಸಿಂದೂರ ಹೆಸರಲ್ಲಿ 26 ಮಂದಿ ಮಹಿಳೆಯರ ಸಿಂದೂರ ಕಸಿದ ಭಯೋತ್ಪಾದಕರನ್ನು ತಯಾರು ಮಾಡುವ ಉಗ್ರಗಾಮಿ ನೆಲೆಗಳಿಗೆ ನುಗ್ಗಿ ಅದನ್ನು ಧ್ವಂಸ ಮಾಡಿದ ಆಪರೇಷನ್ ಸಿಂದೂರ ಕಾರ್ಯಾಚರಣೆಯ ದ್ಯೋತಕವಾಗಿ ಪ್ರತಿ ದೇವಸ್ಥಾನಗಳಲ್ಲೂ ವಿಶೇಷ ಪ್ರಾರ್ಥನೆ, ಸೈನಿಕರಿಗೆ ಶಕ್ತಿ ತುಂಬಲು ಪೂಜೆ, ಪುನಸ್ಕಾರಗಳು ನಡೆಯುತ್ತಿವೆ. ಇದೇ ವೇಳೆ ಶ್ರೀಕೃಷ್ಣನನ್ನು ಚಕ್ರಪಾಣಿಯನ್ನಾಗಿಸಿ ಅಲಂಕಾರವನ್ನು ಮಾಡಲಾಗಿದೆ.ಒಂದು ಕೈಯಲ್ಲಿ ಚಕ್ರ,ಇನ್ನೊಂದು ಕೈಯಲ್ಲಿ ಸಿಂಧೂರ ಬಟ್ಟಲನ್ನು ಹೊಂದಿರುವ ಶ್ರೀಕೃಷ್ಣ ಇಲ್ಲಿ ಕಂಡುಬಂದಿದ್ದಾನೆ. ದುಷ್ಟಸಂಹಾರ ಮತ್ತು ಶಿಷ್ಟ ಪರಿಪಾಲಕ ನಾಗಿ ಕಂಗೊಳಿಸುತ್ತಿದ್ದಾನೆ ಉಡುಪಿಯ ಕೃಷ್ಣ.ನ ಈ ಅಲಂಕಾರ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ