ಜೈನ್ ಮಿಲನ್ ಬಂಟ್ವಾಳ ಮತ್ತು ಜೈನ್ ಮಿಲನ್ ಮೂಡುಬಿದಿರೆಯ ಜಂಟಿ ಮಾಸಿಕ ಸಭೆ ಹಾಗೂ ಡಾ. ಪ್ರಭಾಚಂದ್ರ ಜೈನ್ ಅವರ ಅಭಿನಂದನಾ ಕಾರ್ಯಕ್ರಮ ಸಿದ್ಧಕಟ್ಟೆ ನಲ್ಲೂರಂಗಡಿ ಬಸದಿಯಲ್ಲಿ ನಡೆಯಿತು.
ಜೈನ್ ಮಿಲನ್ ಬಂಟ್ವಾಳದ ಅಧ್ಯಕ್ಷರಾದ ಮಧ್ವರಾಜ್ ಜೈನ್ ಅಧ್ಯಕ್ಷತೆ ವಹಿಸಿದ್ದರು. ಸುಮಾರು ನಾಲ್ಕೂವರೆ ದಶಕಗಳಿಂದ ಸಿದ್ಧಕಟ್ಟೆಯಲ್ಲಿ ವೈದ್ಯರಾಗಿರುವ ಪ್ರಭಾಚಂದ್ರ ಜೈನ್ ಅವರನ್ನು ಉಭಯ ಜೈನ್ ಮಿಲನ್ ಗಳ ವತಿಯಿಂದ ಸನ್ಮಾನಿಸಲಾಯಿತು. ಮಾಜಿ ಸಚಿವರಾದ ಬಿ ರಮಾನಾಥ ರೈ ಮಾತನಾಡಿ, ಡಾ.ಪ್ರಭಾ ಚಂದ್ರ ಜೈನ್ ಕೇವಲ ವೈದ್ಯರು ಮಾತ್ರವಲ್ಲದೆ ಎಲ್ಲಾ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಸರಳ ಸಜ್ಜನಿಕೆಯ ವ್ಯಕ್ತಿತ್ವದವರು, ಇವರ ಅಭಿನಂದನಾ ಕಾರ್ಯಕ್ರಮ ಬಹಳ ಅರ್ಥಪೂರ್ಣವಾಗಿದೆ ಎಂದರು.
ನಲ್ಲೂರಂಗಡಿ ಬಸದಿಯ ಮೊಕ್ತೇಸರ ಮತ್ತು ಮಾಜಿ ಮಂತ್ರಿ ಕೆ .ಅಭಯಚಂದ್ರ ಜೈನ್ ಮಾತನಾಡಿ ಜೈನ್ ಮಿಲನ್ ಗಳು ಸಮಾಜಕ್ಕೆ ಮಾದರಿಯಾದ ಕೆಲಸವನ್ನು ಮಾಡುತ್ತಿದೆ, ಸಿದ್ದಕಟ್ಟೆಯಲ್ಲಿ ಡಾ. ಪ್ರಭಾಚಚಂದ್ರ ಜೈನ್ ರವರ ಆರೋಗ್ಯ ಸೇವೆಯನ್ನು ಪಡೆಯದ ವ್ಯಕ್ತಿಗಳಿಲ್ಲ ಅವರು ಕೇವಲ ವೈದ್ಯರಾಗಿರದೆ , ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು.
ಭಾರತೀಯ ಜೈನ್ ಮಿಲನ್ ವಲಯ 8ರ ಉಪಾಧ್ಯಕ್ಷರಾದ ಸುದರ್ಶನ್ ಜೈನ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಮೂಡಬಿದ್ರೆಯ ನಿವೃತ್ತ ಕನ್ನಡ ಅಧ್ಯಾಪಕರಾದ ಶ್ರೀಧರ್ ಜೈನ್ ಅಭಿನಂದನ ಭಾಷಣ ಮಾಡಿದರು . ಡಾ. ಸುದೀಪ್ ಸಿದ್ದಕಟ್ಟೆ ಸನ್ಮಾನ ಪತ್ರವನ್ನು ವಾಚಿಸಿದರು. ರಶ್ಮಿತ ಯುವರಾಜ್ ಜೈನ್ ಅನಿಸಿಕೆ ವ್ಯಕ್ತಪಡಿಸಿದರು. ಸುಭಾಶ್ಚಂದ್ರ ಜೈನ್ ,ಜಯರಾಜ ಕಂಬಳಿ, ರಾಜೇಶ್ ಕುಮಾರ್ , ಪುಷ್ಪರಾಜ್ , ಶ್ವೇತಾ ಜೈನ್ , ಶಶಿಕಲಾ ಮತ್ತು ಗೀತಾ ಜಿನಚಂದ್ರ ಉಪಸ್ಥಿತರಿದ್ದರು . ಸಿದ್ಧಕಟ್ಟೆಯ ಶ್ರೀ ಅನಂತಪದ್ಮ ಮಹಿಳಾ ಸಂಘ, ಸ್ವಸ್ತಿಕ್ ಯುವಜನ ಸಂಘ, ಮೂಡಬಿದ್ರೆಯ ಸರ್ವ ಮಂಗಳ ಮಹಿಳಾ ಸಂಘದ ಅಧ್ಯಕ್ಷರು ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಆಶಾ ಸುಧಾಕರ್ ಮತ್ತು ಅರ್ಪಿತ ಪ್ರಾಣೇಶ್ ಪ್ರಾರ್ಥಿಸಿದರು . ಉದಯ್ ಕುಮಾರ್ ಜೈನ್ ಸ್ವಾಗತಿಸಿ ನಿರಂಜನ್ ಕುಮಾರ್ ಧನ್ಯವಾದ ನೀಡಿದರು. ಭರತ್ ಕುಮಾರ್ ಮತ್ತು ಸುಪ್ರಿಯ ಕಾರ್ಯಕ್ರಮ ನಿರೂಪಿಸಿದರು.