ಪೆರಾಜೆ ಮಾಣಿಯ ವಿದ್ಯಾನಗರದಲ್ಲಿರುವ ಬಾಲವಿಕಾಸ ರೆಸಿಡೆನ್ಶಿಯಲ್ ಸ್ಕೂಲ್ ನಲ್ಲಿ ಈ ಬಾರಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ದೊರಕಿದೆ ಎಂದು ಮುಖ್ಯೋಪಾಧ್ಯಾಯಿನಿ ಸುಪ್ರಿಯಾ ಡಿ. ತಿಳಿಸಿದ್ದಾರೆ. ಇವರ ಸಾಧನೆಗೆ ಶಾಲೆಯ ಆಡಳಿತ ಮಂಡಳಿ ಅಭಿನಂದನೆ ಸಲ್ಲಿಸಿದೆ. ಸ್ವಸ್ತಿ ಎಸ್. ಭಟ್ 618 ಅಂಕ ಗಳಿಸಿ ರಾಜ್ಯಕ್ಕೆ 8ನೇ ರ್ಯಾಂಕ್ ಗಳಿಸಿದ್ದಾಳೆ. ಈಕೆ ನರಿಕೊಂಬು ಗ್ರಾಮದ ಮೊಗರ್ನಾಡಿನಲ್ಲಿರುವ ವೈದ್ಯ ಡಾ. ಸುಬ್ರಹ್ಮಣ್ಯ ಟಿ. ಮತ್ತು ಪ್ರತಿಭಾ ದಂಪತಿಯ ಪುತ್ರಿ.