ಬಿ.ಸಿ.ರೋಡಿನ ಚಂಡಿಕಾಪರಮೇಶ್ವರಿ ದೇವಸ್ಥಾನದಲ್ಲಿ ಗೆಜ್ಜೆಗಿರಿ ಮೇಳದವರಿಂದ ಯಕ್ಷೋತ್ಸವ 2025 ಕಾರ್ಯಕ್ರಮಕ್ಕೆ ವಿವೇಕಾನಂದ ವಿದ್ಯಾವರ್ದಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಚಾಲನೆ ನೀಡಿದರು.
ಮ್ಮ ಧರ್ಮರಕ್ಷಣೆಯ ಕೈಂಕರ್ಯದಲ್ಲಿ ಯಕ್ಷಗಾನ ಪ್ರಸಂಗಗಳು ಸದಾ ಪ್ರೇರಣೆ ನೀಡಲಿ ಎಂದವರು ಶುಭ ಹಾರೈಸಿದರು, ಮೇಳದ ಕಲಾವಿದರಾದ ಲಕ್ಣ್ಮಣ್ ಗೌಡ ಮುಚ್ಚೂರು, ದಾಮೋದರ ಪಾಟಾಳಿ, ದತ್ತೇಶ್ ಮಾವಿನಕಟ್ಡೆ, ಶ್ರೀಶ ಭಟ್ ಪೊಳಲಿ, ವಿಶ್ವನಾಥ ಕುಲಾಲ್ ಪದ್ಮುಂಜ ಮತ್ತು ಬಾಬಣ್ಣ ಪಾರೆಂಕಿ ಮಡಂತ್ಯಾರ್ ಅವರನ್ನು ಸನ್ಮಾನಿಸಲಾಯಿತು.
ಮೇಳದ ಪ್ರಧಾನ ಭಾಗವತರಾದ ಯೋಗೀಶ್ ಶರ್ಮ ಅಳದಂಗಡಿ, ಪ್ರಸಂಗಕರ್ತ ನಿತಿನ್ ಕುಮಾರ್ ತೆಂಕಕಾರಂದೂರು, ಹಿಮ್ಮೇಳ ಕಲಾವಿದ ಗಣಪತಿ ಭಟ್, ಉದ್ಯಮಿ ಭರತ್ ಅಂಚನ್ ಉಪಸ್ಥಿತರಿದ್ದರು. ಮೇಳದ ಮೆನೇಜರ್ ದೀಪಕ್ ಕೋಟ್ಯಾನ್ ಸಜೀಪ ಸನ್ಮಾನಿತರ ಪರಿಚಯ ವಾಚಿಸಿದರು. ಪ್ರಶಾಂತ್ ಕಾರ್ಯಕ್ರಮ ನಿರ್ವಹಿಸಿದರು. ಸತೀಶ್ ಪೂಜಾರಿ ಸಜೀಪ ದನ್ಯವಾದ ನೀಡಿದರು. ಯಕ್ಷೋತ್ಸವ ಕಾರ್ಯಕ್ರಮದಲ್ಲಿ ದೇವು ಪೂಂಜ ಪ್ರತಾಪ ಬಯಲಾಟ ನಡೆಯಿತು.