PROTEST AT KALLADKA
PROTEST AT KALLADKA
ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ಅಮಾಯಕರ ಹತ್ಯೆ ಖಂಡಿಸಿ ಕಲ್ಲಡ್ಕದಲ್ಲಿ ಶುಕ್ರವಾರ ಸ್ವಯಂಪ್ರೇರಿತವಾಗಿ ಅಂಗಡಿಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಲಾಯಿತು. ಬಳಿಕ ಪ್ಲೈ ಓವರ್ ನ ಅಡಿಭಾಗದಲ್ಲಿ ಪ್ರತಿಭಟನಾ ಸಭೆ ನಡೆಯಿತು. ಹಿರಿಯ ಆರೆಸ್ಸೆಸ್ ಮುಖಂಡ ಡಾ. ಪ್ರಭಾಕರ್ ಭಟ್ ಕಲ್ಲಡ್ಕ ಮಾತನಾಡಿ, ಉಗ್ರರನ್ನು ದಮನಿಸುವ ಹಾಗೂ ರಾಷ್ಟ್ರವಿರೋಧಿ ಮನೋಸ್ಥಿತಿಯವರನ್ನು ಗುರುತಿಸುವ ಕೆಲಸವಾಗಬೇಕು ಹಿಂದೂಗಳ ತಾಳ್ಮೆಯನ್ನು ಕೆಣಕಿ ಪರೀಕ್ಷೆ ಮಾಡಲು ಹೋಗಬೇಡಿ ಎಂದರು.
ಹಿಂದು ಜಾಗರಣಾ ವೇದಿಕೆ ಮುಖಂಡ ರಾಧಾಕೃಷ್ಣ ಅಡ್ಯಂತಾಯ ಸಭೆಯನ್ನುದ್ದೇಶಿಸಿ ಮಾತನಾಡಿದರು. ಮಾಜಿ ಶಾಸಕರಾದ ಎ.ರುಕ್ಮಯ ಪೂಜಾರಿ, ಪದ್ಮನಾಭ ಕೊಟ್ಟಾರಿ, ಮುಖಂಡರಾದ ಚೆನ್ನಪ್ಪ ಆರ್.ಕೋಟ್ಯಾನ್, ದಿನೇಶ್ ಅಮ್ಟೂರು, ಕ.ಕೃಷ್ಣಪ್ಪ, ಸುಜಿತ್ ಕೊಟ್ಟಾರಿ, ಮೋನಪ್ಪ ದೇವಸ್ಯ, ಲಖಿತಾ ಆರ್.ಶೆಟ್ಟಿ, ಯತೀನ್ ಕುಮಾರ್, ಮಿಥುನ್ ಪೂಜಾರಿ, ಅಮಿತ್ ಪೂಜಾರಿ, ಪ್ರೇಮ ಪೂಜಾರಿ, ಜಯಶ್ರೀ, ಸುಲೋಚನ ಜಿ.ಕೆ ಭಟ್, ರತ್ನಾಕರ್ ಶೆಟ್ಟಿ, ನರಸಿಂಹ ಮಾಣಿ, ಪುಷ್ಪರಾಜ್ ಶೆಟ್ಟಿಗಾರ್, ಜಿನರಾಜ್ ಕೋಟ್ಯಾನ್, ಮತ್ತಿತರರು ಉಪಸ್ಥಿತರಿದ್ದರು