ಬಂಟ್ವಾಳ : ಬಂಟ್ವಾಳ ತಾಲೂಕಿನ ಬಾಳ್ತಿಲ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ,ಕಂಟಿಕದಲ್ಲಿ ವಿಷನ್ ಸ್ಟ್ರಿಂಗ್ ದೆಹಲಿ ವತಿಯಿಂದ ಉಚಿತ ಕಣ್ಣಿನ ತಪಾಸಣೆ ಕಾರ್ಯಕ್ರಮ ನಡೆಯಿತು.
ಬಾಳ್ತಿಲ ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ ಕಾರ್ಯಕ್ರಮ ಉದ್ಘಾಟಿಸಿ ತಪಾಸಣೆಗೆ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಪಂಚಾಯತ್ ಸದಸ್ಯರಾದ ರಾಜೇಶ್, ಎಸ್.ಡಿ ಎಂ.ಸಿ ಅಧ್ಯಕ್ಷ ರಾಜೇಶ್, ನೇತ್ರಧಿಕಾರಿ ಹರ್ಷಿತಾ, ಹೊರ ಸಂಪರ್ಕ ಅಧಿಕಾರಿ ಜಯಪಾಲ್, ಸಹಾಯಕರಾದ ಲಾವಣ್ಯ, ಧನ್ಯಶ್ರೀ ಉಪಸ್ಥಿತರಿದ್ದರು. 85 ಜನರು ಸದುಪಯೋಗ ಪಡೆದುಕೊಂಡರು. ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಚೇತನಾ ಸ್ವಾಗತಿಸಿ ವಂದಿಸಿದರು.