ಬಂಟ್ವಾಳ

ಸಮಾಜ ಸೇವಾ ಸಹಕಾರಿ ಸಂಘ 1159 ಕೋಟಿ ರೂ ವ್ಯವಹಾರ, 5.05 ಕೋಟಿ ರೂ ಲಾಭ, ಶೀಘ್ರ ಹೊಸ ಶಾಖೆ ಆರಂಭ

ಜಾಹೀರಾತು

ಬಂಟ್ವಾಳದಲ್ಲಿ ಸ್ವಂತ ಕಟ್ಟಡದಲ್ಲಿ ಕೇಂದ್ರ ಕಛೇರಿ ಹೊಂದಿರುವ ಸಮಾಜ ಸೇವಾ ಸಹಕಾರಿ ಸಂಘವು 2024-25ನೇ ಸಾಲಿನಲ್ಲಿ ರೂ. 1159 ಕೋಟಿ ಅತ್ಯುತ್ತಮ ವ್ಯವಹಾರ ನಡೆಸಿದ್ದು ಸುಮಾರು ರೂ. 5.05 ಕೋಟಿ (ತಾತ್ಕಲಿಕ) ಲಾಭ ಗಳಿಸಿರುತ್ತದೆ ಎಂದು ಅಧ್ಯಕ್ಷ ಸುರೇಶ್ ಕುಲಾಲ್ ಮಾಹಿತಿ ನೀಡಿದರು.

ಸಂಘದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಸ್ವಾತಂತ್ರ್ಯ ಹೋರಾಟಗಾರ ಸಮಾಜರತ್ನ ದಿ| ಡಾ| ಅಮ್ಮೆಂಬಳ ಬಾಳಪ್ಪರವರ ನೇತೃತ್ವದಲ್ಲಿ ಹಾಗೂ ಸಹಕಾರಿ ಧುರಿಣ ಬಿ. ಹೂವಯ್ಯ ಮೂಲ್ಯರವರ ಸಾರಥ್ಯದಲ್ಲಿ ಕೇವಲ 131 ಸದಸ್ಯರನ್ನೊಳಗೊಂಡು 22,620 ರೂ  ಪಾಲು ಬಂಡವಾಳದೊಂದಿಗೆ ಸ್ಥಾಪಿಸಲ್ಪಟ್ಟ ಸಮಾಜ ಸೇವಾ ಸಹಕಾರಿ ಸಂಘವು ಪ್ರಸ್ತುತ 16 ಶಾಖೆಗಳನ್ನು ಹೊಂದಿದ್ದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಕಾರ್ಯ ವ್ಯಾಪ್ತಿಯನ್ನು ಹೊಂದಿದೆ. ಸಂಘದ ಪುಂಜಾಲಕಟ್ಟೆ, ಮುಡಿಪು ಮತ್ತು ಉಪ್ಪಿನಂಗಡಿ ಶಾಖೆಯು ಸ್ವಂತ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದೆ ಎಂದರು.

ಸಿಇಒ ಭೋಜ ಮೂಲ್ಯ ಈ ಕುರಿತು ಮಾಹಿತಿ ನೀಡಿ, ಆರ್ಥಿಕ ವರ್ಷ ೨೦೨೪-೨೫ ರ ಅಂತ್ಯಕ್ಕೆ ಸಂಘದಲ್ಲಿ 9047 ’ಎ’ ತರಗತಿ, 5556 ’ಬಿ’ ತರಗತಿ ಸದಸ್ಯರಿದ್ದು ರೂ. 8.09 ಕೋಟಿ ಪಾಲು ಬಂಡವಾಳ ಹೊಂದಿರುತ್ತದೆ. ೧೯.೭೮ ಕೋಟಿ ರೂ. ನಿಧಿಗಳು, ೫೫.೩೫ ಕೋಟಿ ರೂ. ವಿನಿಯೋಗಗಳು, 229.47 ಕೋಟಿ ರೂ. ಠೇವಣಾತಿಗಳು ಇದ್ದು ೨೧೫.೨೧ ಕೋಟಿ ರೂ. ಹೊರಬಾಕಿ ಸಾಲಗಳು ಇರುತ್ತದೆ. ಸಂಘದ ದುಡಿಯುವ ಬಂಡವಾಳ ರೂ. ೨೫೯.೬೬ ಕೋಟಿ ಆಗಿರುತ್ತದೆ ಎಂದರು.

ಆಡಿಟ್ ವರ್ಗೀಕರಣದಲ್ಲಿ ಸತತವಾಗಿ ಎ ತರಗತಿ ಹೊಂದಿರುವ ಸಂಘವು ಸದಸ್ಯರ ಅನುಕೂಲಕ್ಕಾಗಿ ಬಂಟ್ವಾಳ ಬೈಪಾಸ್ ಶಾಖೆಯಲ್ಲಿ ಇ-ಸ್ಟ್ಯಾಂಪ್ ಸೌಲಭ್ಯವನ್ನು, ಕೆಲವು ಶಾಖೆಗಳಲ್ಲಿ ಸೇಪ್ ಲಾಕರ್ ಸೌಲಭ್ಯವನ್ನು, ಮಣಿಪಾಲ ಆರೋಗ್ಯ ಕಾರ್ಡ್ ಸೌಲಭ್ಯ, ಸದಸ್ಯರ ಮಕ್ಕಳಿಗೆ ಉನ್ನತ ವ್ಯಾಸಂಗಕ್ಕಾಗಿ ವಿದ್ಯಾರ್ಥಿ ವೇತನವನ್ನು, ಯಶಸ್ವಿನಿ ಆರೋಗ್ಯ ರಕ್ಷಣಾ ಸೌಲಭ್ಯ, ಸದಸ್ಯರ ಗಂಭೀರವಾದ ಕಾಯಿಲೆಗೆ ಆರ್ಥಿಕ ಸಹಾಯಧನ ಹೀಗೆ ಹಲವಾರು ಸೌಲಭ್ಯಗಳನ್ನು ಸದಸ್ಯರಿಗೆ ನೀಡುತ್ತ ಬಂದಿದೆ. ೨೦೨೩-೨೪ ನೇ ಸಾಲಿನಲ್ಲಿ ವ್ಯವಹಾರದಲ್ಲಿ ಸರ್ವತೋಮುಖ ಪ್ರಗತಿ ಸಾಧಿಸಿ ಹಾಗೂ ಬ್ಯಾಂಕಿನೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಯಮಿತ ಮಂಗಳೂರು ಇವರಿಂದ ಸಾಧನಾ ಪ್ರಶಸ್ತಿ ಪಡೆದುಕೊಂಡಿರುತ್ತದೆ. ಈಗಾಗಲೇ ಮೂರು ಬಾರಿ ಸಾಧನಾ ಪ್ರಶಸ್ತಿ ಪಡೆದುಕೊಂಡಿರುತ್ತದೆ ಎಂದರು

೨೦೨೫-೨೬ ನೇ ಸಾಲಿನಲ್ಲಿ ನಮ್ಮ ಸಂಘದ ವ್ಯವಹಾರವನ್ನು ವಿಸ್ತರಿಸುವ ಸಲುವಾಗಿ ಮತ್ತು ಸಮಾಜದ ಕಟ್ಟ ಕಡೆಯ ಹಿಂದುಳಿದ ವ್ಯಕ್ತಿಯು ಆರ್ಥಿಕವಾಗಿ ಸದೃಡರಾಗಬೆಕೆನ್ನುವ ಹಾಗೂ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಆಶಯದೊಂದಿಗೆ ವಾಮಂಜೂರಿನಲ್ಲಿ ಹೊಸ ಶಾಖೆಯನ್ನು ತೆರೆಯುವ ಇರಾದೆಯು ಆಡಳಿತ ಮಂಡಳಿಯದಾಗಿದೆ. ಹಾಗೆಯೇ ಮೆಲ್ಕಾರ್ ಶಾಖೆಗೆ ಸ್ವಂತ ಕಟ್ಟಡವನ್ನು ಖರಿದಿಸುವ ಪ್ರಸ್ತಾವನೆಯು ಆಡಳಿತ ಮಂಡಳಿಯ ಮುಂದಿರುತ್ತದೆ ಎಂದು ಹೇಳಿದರು. ಸಂಘದ ಉಪಾಧ್ಯಕ್ಷ ಬೊಂಡಾಲ ಜನಾರ್ದನ ಕುಲಾಲ್, ನಿರ್ದೇಶಕರಾದ ಅರುಣ್ ಕುಮಾರ್ ಕೆ ಸಜಿಪ. ಅರುಣ್ ಬೋರುಗುಡ್ಡೆ, ರಮೇಶ್ ಸಾಲ್ಯಾನ್, ಬಿ.ರಮೇಶ್ ಸಾಲ್ಯಾನ್,  ಭೋಜ ಸಾಲಿಯಾನ್, ಕಿರಣ್ ಕುಮಾರ್ ಅಟ್ಲೂರು, ಪ್ರೇಮನಾಥ ಬಂಟ್ವಾಳ್, ಸತೀಶ್ ಪಲ್ಲಮಜಲು, ಹರೀಶ್ ಜಾರಬೆಟ್ಟು, ಮಾಲತಿ ಮಚೇಂದ್ರ, ಜಗನ್ನಿವಾಸ ಗೌಡ, ಹಾಗೂ ಎಜಿಎಂ ಮೋಹನ ಎಂ.ಕೆ. ಉಪಸ್ಥಿತರಿದ್ದರು.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts

ಮಂಗಳೂರು ಕಡಲ ತೀರ ʼಕಡಲ ಪವನ ಶಕ್ತಿ ಉತ್ಪಾದನಾ ವಲಯʼವಾಗಿ ಅಭಿವೃದ್ಧಿಪಡಿಸಲು ಕೇಂದ್ರಕ್ಕೆ ಮನವಿ

ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)

5 hours ago