‘
ಕಲ್ಲಡ್ಕ ಸಮೀಪ ನೆಟ್ಲದ ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನಕ್ಕೆ ಕದ್ರಿ ಜೋಗಿಮಠದ ಶ್ರೀ ನಿರ್ಮಲನಾಥಜೀ ಮಹಾರಾಜ್ ಸೋಮವಾರ ಭೇಟಿ ನೀಡಿ, ಇಲ್ಲಿ ನಡೆಯಲಿರುವ ಅತಿಮಹಾರುದ್ರಯಾಗದ ಸಿದ್ಧತೆಗಳನ್ನು ವೀಕ್ಷಿಸಿದರು.
ಮೊಗರ್ನಾಡು ಸಾವಿರ ಸೀಮೆ ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನದಲ್ಲಿ ಮೇ ತಿಂಗಳಲ್ಲಿ ಅತಿಮಹಾರುದ್ರ ಯಾಗ ನಡೆಯಲಿದ್ದು, ಪೂರ್ವತಯಾರಿ ವೀಕ್ಷಣೆಗೆ ಕದ್ರಿ ಕದಲಿ ಜೋಗಿ ಮಠಾಧಿಶ್ವರರಾದ ಶ್ರೀ ನಿರ್ಮಲನಾಥ್ ಜೀ ಮಹಾರಾಜ್ ಆಗಮಿಸಿದ್ದು, ಈ ವೇಳೆ ರುದ್ರಪಾರಾಯಣದ ದೀಪ ಪ್ರಜ್ವಲನೆಯನ್ನು ನೆರವೇರಿಸಿದರು. ಇದೇ ಸಂದರ್ಭ, ಯಾಗದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಿದರು. ಯಾಗ ಸಮಿತಿ ಗೌರವಾಧ್ಯಕ್ಷ ರಘುನಾಥ್ ಸೋಮಯಾಜಿ, ಕಾರ್ಯಾಧ್ಯಕ್ಷ ಜಗನ್ನಾಥ ಚೌಟ, ಪ್ರಮುಖರಾದ ಸಂತೋಷ್ ಶೆಟ್ಟಿ ಅರೆಬೆಟ್ಟು, ಶಂಕರನಾರಾಯಣ ಭಟ್ ಕೆಲಿಂಜ, ಯುವಕ ಮಂಡಲ ಬಾಳ್ತಿಲ, ಓಡಿಯೂರು ಶ್ರೀ ಗ್ರಾಮ ವಿಕಾಸ ಕಲ್ಲಡ್ಕ ಘಟಕದ ಸದಸ್ಯರು, ಶಂಭುಗ ಫ್ರೆಂಡ್ಸ್ ಶಂಭುಗ, ಯಾಗ ಸಮಿತಿ ಸದಸ್ಯರು, ಮುಖಂಡರು ಹಾಗೂ ಭಕ್ತಾಭಿಮಾನಿಗಳು ಭಾಗವಹಿಸಿದ್ದರು.