ಕಲ್ಲಡ್ಕ ಸಮೀಪ ನೆಟ್ಲದ ಶ್ರೀ ನಿಟಿಲಾಕ್ಷ ಸದಾಶಿವ ದೇವಸ್ಥಾನದಲ್ಲಿ ಲೋಕಕಲ್ಯಾಣರ್ಥವಾಗಿ ನಡೆಯಲಿರುವ ಅತಿಮಹಾರುದ್ರಯಾಗದ ಪೂರ್ವಭಾವಿ ಮಹಿಳಾ ಸಭೆ ಭಾನುವಾರ ಸಂಜೆ ನಡೆಯಿತು.
ಅಧ್ಯಕ್ಷತೆಯನ್ನು ಅತಿಮಹಾರುದ್ರ ಯಾಗದ ಕಾರ್ಯಧ್ಯಕ್ಷರಾದ ಜಗನ್ನಾಥ ಚೌಟ ಬದಿಗುಡ್ಡೆ ವಹಿಸಿದ್ದರು. ಗೌರವಾಧ್ಯಕ್ಷ ರಘುನಾಥ ಸೋಮಯಾಜಿ ಉಪಸ್ಥಿತರಿದ್ದರು. ಈ ಸಂದರ್ಭ ವಿದ್ವಾನ್ ಅನಂತರಾಮ ಐತಾಳ್ ಓಣಿಬೈಲು ಅವರು ಮಾರ್ಗದರ್ಶನ ಮಾಡಿದರು. ಯಾಗ ಸಮಿತಿ ಪ್ರಮುಖರು, ಸದಸ್ಯರು ಹಾಜರಿದ್ದರು.
ಭಾನುವಾರ ರುದ್ರಪಾರಾಯಣ ಕಾರ್ಯಕ್ರಮದ ದೀಪ ಪ್ರಜ್ವಲನೆಯನ್ನು ಪ್ರಕಾಶ್ ಕಾರಂತ ನರಿಕೊಂಬು, ಶಂಕರ ನಾರಾಯಣ ಐತಾಳ್ ಓಣಿ ಬೈಲು, ಯುವಸಂಗಮ ಸೇವಾ ಟ್ರಸ್ಟ್ ಮತ್ತು ಶ್ರೀ ದುರ್ಗಾ ಮಹಿಳಾ ಮಂಡಳಿ ನರಿಕೊಂಬು, ಉತ್ಸಹಿ ತರುಣಾ ವೃಂದ ಬೊಂಡಲ, ಶಾರದಾ ಯುವ ವೇದಿಕೆ ಮಾಣಿ ನೆರವೇರಿಸಿದರು. ಯಾಗ ಸಮಿತಿ ಸದಸ್ಯರು, ಇತರ ಪ್ರಮುಖರು ಹಾಗೂ ಭಕ್ತಾದಿಗಳು ಭಾಗವಹಿಸಿದ್ದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…