ಬಂಟ್ವಾಳ: ನಿಟಿಲಾಕ್ಷ ಶ್ರೀ ಸದಾಶಿವ ದೇವಸ್ಥಾನದಲ್ಲಿ ನಡೆಯಲಿರುವ ಅತಿರುದ್ರಮಹಾಯಾಗದ ನಿಮಿತ್ತ ಮಹಿಳಾ ಸಮಿತಿ ಸಭೆಯನ್ನು ಏಪ್ರಿಲ್ 20ರಂದು ಕರೆಯಲಾಗಿದೆ. ಸಂಜೆ 5 ಗಂಟೆಗೆ ಈ ಸಭೆ ನಡೆಯಲಿದೆ. ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಸಂಘ, ಸಂಸ್ಥೆಗಳ ಮಹಿಳಾ ಪ್ರತಿನಿಧಿಗಳು ಸಭೆಗೆ ಆಗಮಿಸಲು ಸಂಘಟಕರು ವಿನಂತಿಸಿದ್ದಾರೆ. ಮೇ 2, 3,4ರಂದು ನಡೆಯುವ ಧಾರ್ಮಿಕ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಬೇಕಾಗಿ ಅವರು ಕೋರಿದ್ದಾರೆ.