filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 47;
ಯೇಸು ಕ್ರಿಸ್ತರು ಶಿಲುಬೆಯಲ್ಲಿ ತಮ್ಮ ಪ್ರಾಣವನ್ನು ಅರ್ಪಿಸಿದ ದಿನವಾದ ಶುಭ ಶುಕ್ರವಾರ ಲೋರೆಟ್ಟೊ ಮತಾ ಚರ್ಚ್ ನಲ್ಲಿ ಚರ್ಚ್ ನಿಂದ ಪಂಚಾಯತ್ ಮಾರ್ಗವಾಗಿ ಶಿಲುಬೆಯ ಗುಡ್ಡದ ವರೆಗೆ ಶಿಲುಬೆ ಹಾದಿಯಲ್ಲಿ ನೂರಾರು ಭಕ್ತಾದಿಗಳು ಪಾಲ್ಗೊಂಡರು. ಚರ್ಚ್ ಧರ್ಮ ಗುರುಗಳಾದ ವಂ ಫ್ರಾನ್ಸಿಸ್ ಕ್ರಾಸ್ತಾ , ಪ್ರಧಾನ ಧರ್ಮಗುರುಗಳಾಗಿ ಮಂಗಳೂರು ಧರ್ಮಪ್ರಾಂತ್ಯದ ಕೌಟುಂಬಿಕ ಸಲಹಾ ಕೇಂದ್ರದ ನಿರ್ದೇಶಕರಾಗಿರುವ ವಂ ಸ್ವಾಮಿ ಆಲ್ವಿನ್ ಡಿಸೋಜ, ಶಿಲುಬೆಯ ಪ್ರಾಮುಖ್ಯತೆಯ ಬಗ್ಗೆ ಪ್ರವಚನ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಲೊರೆಟ್ಟೊ ಚರ್ಚ್ ನಲ್ಲಿ ಧರ್ಮಗುರು ಗಳಾಗಿ ಸೇವೆ ಸಲ್ಲಿಸಿ ನಿನ್ನತ್ತರಾಗಿರುವ ವಂ.ಸ್ವಾಮಿ ನೋರ್ಬಟ್ ಲೋಬೊ, ಲೋರೆಟ್ಟೊ ಅಂಗ್ಲ ಮಾಧ್ಯಮ ಶಾಲಾ ಮುಖ್ಯೋಪಾಧ್ಯಾಯರಾದ ವಂ ಜೆಸನ್ ಮೊನಿಸ್ ಬಲಿಪೂಜೆಯಲ್ಲಿ ಪಾಲ್ಗೊಂಡರು.