ಬಂಟ್ವಾಳ ರಿಕ್ಷಾ ಭವನದ ರಿಕ್ಷಾ ಡ್ರೈವರ್ಸ್ ಅಸೋಸಿಯೇಶನ್ 49ನೇ ವಾರ್ಷಿಕ ಮಹಾಸಭೆ ನಡೆದಿದೆ. ಸಭೆಯನ್ನು ರಾಜ್ಯ ವಕೀಲರ ಪರಿಷತ್ ಬೆಂಗಳೂರು ಮಾಜಿ ಉಪಾಧ್ಯಕ್ಷ ಟಿ. ನಾರಾಯಣ ಪೂಜಾರಿ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ವಕೀಲರಾದ ರಾಜೇಶ್ ಬೊಳ್ಳುಕಲ್ಲು ವಹಿಸಿದ್ದರು.
ಅತಿಥಿಯಾಗಿ ಹುಸೈನ್, ಕಾರ್ಯದರ್ಶಿ ಪ್ರಕಾಶ್, ಖಜಾಂಜಿ ಕೃಷ್ಣಪ್ಪ ಉಪಸ್ಥಿತರಿದ್ದರು. ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಟಿ. ನಾರಾಯಣ ಪೂಜಾರಿ ಸಂಘಟನೆ ಬೆಳೆದು ಬಂದ ಬಗ್ಗೆ ವಿವರಿಸಿದರು. ರಾಜೇಶ್ ಬೊಳ್ಳುಕಲ್ಲು ಮಾತನಾಡಿ ಸಂಘದ ಸದಸ್ಯರಲ್ಲಿ ಜನಸೇವೆ, ಪ್ರಾಮಾಣಿಕತೆ ಬೆಳೆಸಿಕೊಳ್ಳಲು ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಚಾಲಕರಿಗೆ ಅದೃಷ್ಟಚೀಟಿ ಮೂಲಕ ಸಮವಸ್ತ್ರ ವಿತರಿಸಿದರು. ಚಂದ್ರಶೇಖರ್ ವಂದಿಸಿದರು.