https://www.opticworld.net/
ಕಲ್ಲಡ್ಕ ಸಮೀಪ ನೆಟ್ಲದ ಶ್ರೀ ನಿಟಿಲಾಕ್ಷ ಸದಾಶಿವ ದೇವಳದಲ್ಲಿ ಅತಿಮಹಾರುದ್ರಯಾಗ ಮೇ.2ರಿಂದ 4ರವರೆಗೆ ನಡೆಯಲಿದ್ದು, ಈ ಸಂದರ್ಭ ಪ್ರತಿದಿನ ರುದ್ರಪಠಣ ನಡೆಯುತ್ತಿದ್ದು,ಸೋಮವಾರದ ಕಾರ್ಯಕ್ರಮಕ್ಕೆ ಮಾಜಿ ಸಚಿವ ಬಿ.ರಮಾನಾಥ ರೈ ಆಗಮಿಸಿ ಚಾಲನೆ ನೀಡಿದರ.
/ ಶ್ರೀಮದ್ ಕಾಶಿಜ್ಞಾನ ಸಂಸ್ಥಾನಾಧೀಶ್ವರ ಶ್ರೀ 1008 ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಅವರ ದಿವ್ಯ ಸಾನಿಧ್ಯದಲ್ಲಿ ಹಾಗೂ ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ಮಾರ್ಗದರ್ಶನದಲ್ಲಿ ಲೋಕಕಲ್ಯಾಣಾರ್ಥವಾಗಿ ಅತೀಮಹಾರುದ್ರಯಾಗ ನಡೆಯಲಿದೆ. ಈ ಸಂದರ್ಭ ಸಮಿತಿ ಗೌರವಾಧ್ಯಕ್ಷ ರಘುನಾಥ ಸೋಮಯಾಜಿ, ಕಾರ್ಯಾಧ್ಯಕ್ಷ ಜಗನ್ನಾಥ ಚೌಟ ಬದಿಗುಡ್ಡೆ, ಪ್ರಮುಖರಾದ ಶರಣ್ ಪಂಪ್ ವೆಲ್, ಸಂದೀಪ್ ಅರೆಬೆಟ್ಟು, ಯುವಕೇಸರಿ ಅರೆಬೆಟ್ಟು, ಶ್ರೀ ಉಳ್ಳಾಲ್ತಿ ಭಕ್ತ ಸೇವಾ ಸಮಿತಿ ಅನಂತಾಡಿ, ನವಜೀವನ ವ್ಯಾಯಾಮ ಶಾಲೆ ಪಾಣೆಮಂಗಳೂರು, ರಕ್ತೇಶ್ವರಿ ದೇವಸ್ಥಾನ ಸುದ್ದೆಕ್ಕಾರ್, ಯಾಗ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಇತರ ಪ್ರಮುಖರು ಉಪಸ್ಥಿತರಿದ್ದರು.