ಮಕ್ಕಳಿಗೆ ನಮ್ಮ ಮೂಲ ಸಂಸ್ಕಾರ ಸಂಸ್ಕೃತಿ ಜೊತೆಗೆ ಏಕಾಗ್ರತೆಗೆ, ನೆನಪಿನ ಶಕ್ತಿ ವೃದ್ಧಿಸಲು ಭಜನೆ ಸಹಕಾರಿಯಾಗಿದೆ ಎಂದು ನರಿಕೊಂಬು ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಭಜನಾ ಪರಿಷತ್ ವತಿಯಿಂದ ನರಿಕೊಂಬು ಅಂತರದ ಶ್ರೀ ಕೋದಂಡರಾಮ ಭಜನಾ ಮಂಡಳಿ ಸಹಯೋಗದೊಂದಿಗೆ ವಾರದ ಭಜನಾ ತರಬೇತಿ ಶಿಬಿರವನ್ನು ಭಜನಾ ಮಂಡಳಿ ಸಭಾಂಗಣದಲ್ಲಿ ಉದ್ಘಾಟಿಸಿ ಮಾತನಾಡಿದರು.
ಗ್ರಾಮಾಭಿವೃದ್ಧಿ ಯೋಜನೆಯ ಬಂಟ್ವಾಳ ತಾಲೂಕು ಯೋಜನಾಧಿಕಾರಿ ಜಯಾನಂದ ಪಿ, ನರಿಕೊಂಬು ಗ್ರಾಮ ಪಂಚಾಯತ್ ಸದಸ್ಯರಾದ ಕಿಶೋರ್ ಶೆಟ್ಟಿ ಅಂತರ, ಪ್ರಗತಿಪರ ಕೃಷಿಕ ಪ್ರೇಮನಾಥ್ ಶೆಟ್ಟಿ ಅಂತರ, ಕೋದಂಡರಾಮ ಭಜನಾ ಮಂದಿರ ಅಧ್ಯಕ್ಷ ಚಂದ್ರಶೇಖರ ಗೌಡ,,ಜಿಲ್ಲಾ ಭಜನಾ ಪರಿಷತ್ ಸಮವ್ವಯಾಧಿಕಾರಿ ಸಂತೋಷ್,ಅಳಿಯೂರು, ಭಜನೆ ತರೆಬೆತು ದಾರರಾದ ಸಂದೇಶ್, ಗಗನ್, ಆಕಾಶ್ ಉಪಸ್ಥಿತರಿದ್ದರು.
ನರಿಕೊಂಬು ಎ ಒಕ್ಕೂಟ ಅಧ್ಯಕ್ಷ ಕೃಷ್ಣಪ್ಪ ಸಪಲ್ಯ ಸ್ವಾಗತಿಸಿದರು. ಭಜನಾ ಮಂಡಳಿ ಸದಸ್ಯ ಗಣೇಶ್ ಕುಮಾರ್ ವಂದಿಸಿದರು. ತುಂಬೆ ವಲಯ ಮೇಲ್ವಿಚಾರಕಿ ಮಮತಾ ಸಂತೋಷ್ ಕಾರ್ಯಕ್ರಮ ನೀರೂಪಿಸಿದರು. ಸೇವಾಪ್ರತಿನಿದಿಗಳಾದ ಕುಸುಮಾವತಿ ಹಾಗೂ ಪ್ರತಿಭಾ ಸಹಕರಿಸಿದರು