ಕಲ್ಲಡ್ಕ ಸಮೀಪ ನೆಟ್ಲದ ಶ್ರೀ ನಿಟಿಲಾಕ್ಷ ಸದಾಶಿವ ದೇವಳದಲ್ಲಿ ಅತಿಮಹಾರುದ್ರಯಾಗ ಮೇ.2ರಿಂದ 4ರವರೆಗೆ ನಡೆಯಲಿದ್ದು, ಈ ಸಂದರ್ಭ ಪ್ರತಿದಿನ ರುದ್ರಪಠಣ ನಡೆಯುತ್ತಿದ್ದು, ಭಾನುವಾರ ವಿಶೇಷವಾಗಿ 150 ವೈದಿಕರಿಂದ ಮಹಾರುದ್ರಪಠಣ ನಡೆಯಿತು.
ಇದೇ ವೇಳೆ ಪೂರ್ವಭಾವಿ ಸಭೆ ನಡೆಯಿತು. ಮೊಗರ್ನಾಡು ಸಾವಿರ ಸೀಮೆಯ ನಿಟಿಲಾಪುರ ನಿಟಿಲಾಕ್ಷ ಸದಾಶಿವ ದೇವಸ್ಥಾನದ ವಠಾರದಲ್ಲಿ ಶ್ರೀಮದ್ ಕಾಶಿಜ್ಞಾನ ಸಂಸ್ಥಾನಾಧೀಶ್ವರ ಶ್ರೀ 1008 ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಅವರ ದಿವ್ಯ ಸಾನಿಧ್ಯದಲ್ಲಿ ಹಾಗೂ ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ಮಾರ್ಗದರ್ಶನದಲ್ಲಿ ಲೋಕಕಲ್ಯಾಣಾರ್ಥವಾಗಿ ಅತೀಮಹಾರುದ್ರಯಾಗ ನಡೆಯಲಿದೆ. ಇದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಪೂರ್ವವಾದ ಕಾರ್ಯಕ್ರಮವಾಗಿರುವ ಕಾರಣ ಇದಕ್ಕೆ ಸರ್ವರ ಸಹಕಾರ ಅಗತ್ಯವೆಂದು ಸಮಿತಿ ಗೌರವಾಧ್ಯಕ್ಷ ಬಿ.ರಘುನಾಥ ಸೋಮಯಾಜಿ ಈ ಸಂದರ್ಭ ಹೇಳಿದರು.
ಅಧ್ಯಕ್ಷತೆಯನ್ನು ಸಮಿತಿ ಅಧ್ಯಕ್ಷ ಬ್ರಹ್ಮಾನಂದ ರೆಡ್ಡಿ ಈ ಸಂದರ್ಭ ಉಪಸ್ಥಿತರಿದ್ದರು. ಸಮಿತಿ ಕಾರ್ಯಾಧ್ಯಕ್ಷ ಜಗನ್ನಾಥ ಚೌಟ ಬದಿಗುಡ್ಡೆ ಅವರು ಮಾತನಾಡಿ, ಯಾಗಕ್ಕೆ ಸಂಬಂಧಿಸಿದಂತೆ ಪೂರ್ವತಯಾರಿ ಅತ್ಯವಶ್ಯಕವಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಊರ, ಪರವೂರ ಭಕ್ತರು ಸಕ್ರಿಯವಾಗಿ ತೊಡಗಿಸಿಕೊಂಡು ಲೋಕಕಲ್ಯಾಣಾರ್ಥವಾಗಿ ನಡೆಯುವ ಯಾಗದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು. ವಿದ್ವಾನ್ ಅನಂತ ಭಟ್ ಓಣಿಬೈಲ್ ಯಾಗದ ಕುರಿತು ಮಾಹಿತಿ ನೀಡಿದರು. ಪ್ರಮುಖ ಗಣ್ಯರು ಭಕ್ತಾಭಿಮಾನಿಗಳು, ಸಂಘ ಸಂಸ್ಥೆಗಳು ಭಾಗವಹಿಸಿದ್ದರು.
ರುದ್ರಪಾರಾಯಣ ಕಾರ್ಯಕ್ರಮದ ದೀಪ ಪ್ರಜ್ವಲನೆಯನ್ನು ಭಾನುವಾರ ಎ. ವಿ ಸಗ್ರಿತ್ತಾಯ ನಡೆಸಿದರು ಭಾನುಶಂಕರ ಬನ್ನಿಂತಾಯ, ನೇಮೋತ್ಸವ ಸಮಿತಿ ಬೊಂಡಾಲ, ,ಶಂಕರ್ ಎನ್. ಚಿತ್ರದುರ್ಗ, ವೈಶಾಕ್ ಬೋಳಂತೂರು, ಭಾಗವಹಿಸಿದ್ದರು.
(more…)