ಸಾವಿರ ಸೀಮೆಯ ಒಡತಿ ಪೊಳಲಿ ಶ್ರೀ ರಾಜರಾಜೇಶ್ವರೀ ಅಮ್ಮನವರ ದೇವಸ್ಥಾನದ ಸುದೀರ್ಘ ಒಂದು ತಿಂಗಳ ಕಾಲದ ವಾರ್ಷಿಕ ಜಾತ್ರೆಯ ನಿಮಿತ್ತ ವೈಭವದ ಮಹಾರಥೋತ್ಸವ ಗುರುವಾರ ಸಂಜೆ ನಡೆಯಿತು. ಭಕ್ತರ ಜಯಘೋಷದ ನಡುವೆ ರಥೋತ್ಸವ ಸಂಪನ್ನಗೊಂಡಿತು. ಏ.9ರಂದು ಕಡೇ ಚೆಂಡಿನ ಉತ್ಸವದ ಬಳಿಕ ಗುರುವಾರ ರಥೋತ್ಸವ ನಡೆಯುತ್ತದೆ. ಈ ಸಂದರ್ಭ ಸಿಡಿಮದ್ದಿನ ಪ್ರದರ್ಶನವೂ ನಡೆಯಿತು. ಪೊಳಲಿ ಶ್ರೀ ರಾಜರಾಜೇಶ್ವರಿ ದೇವಿಯ ದೇವಸ್ಥಾನದ ಸುದೀರ್ಘ ಒಂದು ತಿಂಗಳ ವಾರ್ಷಿಕ ಜಾತ್ರೆಯ ಪ್ರಮುಖ ಘಟ್ಟವಾದ ಮಹಾರಥೋತ್ಸವ ವೀಕ್ಷಿಸಲು ಗುರುವಾರ ಸಂಜೆ ಸಹಸ್ರಾರು ಮಂದಿ ಸೇರಿದ್ದರು.
ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕ ಚೈತನ್ಯಾನಂದಜಿ, ಶಾಸಕ ರಾಜೇಶ್ ನ್ಯಾಕ್ ಉಳಿಪಾಡಿಗುತ್ತು, ಮಾಜಿ ಸಚಿವರಾದ ಬಿ.ರಮಾನಾಥ ರೈ, ಬಿ.ನಾಗರಾಜ ಶೆಟ್ಟಿ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು. ಅನುವಂಶಿಕ ಆಡಳಿತ ಮೊಕೇಸರ ಅಮ್ಮುಂಜೆಗುತ್ತು ಡಾ| ಮಂಜಯ್ಯ ಶೆಟ್ಟಿ ಪವಿತ್ರಪಾಣಿ ಪಿ.ಮಾಧವ ಭಟ್, ದೇವಳದ ತಂತ್ರಿಗಳು, ಅರ್ಚಕರು, ಕಾರ್ಯ ನಿರ್ವಹಣಾಧಿಕಾರಿ ಪ್ರವೀಣ್. ಗುತ್ತಿನವರು ಉಪಸ್ಥಿತರಿದ್ದರು.